Wednesday, July 22, 2026
spot_imgspot_img
spot_imgspot_img

ಬೀದರ್‌: ಸಿಡಿಲು ಬಡಿದು ಇಬ್ಬರು ಯುವ ರೈತರು ಸಾವು

- Advertisement -
- Advertisement -

ಬೀದರ್: ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ.

ನಾವದಗಿ ಗ್ರಾಮದ ರೇವಣಸಿದ್ದ(28) ಮತ್ತು ಜೇವರ್ಗಿಯ ಯಲ್ಲಾಲಿಂಗ(28) ಸಿಡಿಲಿಗೆ ಬಲಿಯಾದ ಯುವಕರು.

ಗುರುವಾರ ಸಂಜೆ (ಏ.23) ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಶುರುವಾಗಿದ್ದರಿಂದ, ಇಬ್ಬರು ರೈತರು ಜಮೀನಿನಲ್ಲಿದ್ದ ಮಾವಿನ ಮರದ ಕಳಗಡೆ ನಿಂತಿದ್ದರು. ಈ ವೇಳೆ ಮಾವಿನ ಮರಕ್ಕೆ ಸಿಡಿಲು ಅಪ್ಪಳಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಖಟಕ್ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!