- Advertisement -
- Advertisement -




ವಿಟ್ಲ: ಭಾರತೀಯ ಅಂಚೆ ಇಲಾಖೆಯಲ್ಲಿ 13 ವರ್ಷಗಳಿಂದ ಅಂಚೆ ಸಹಾಯಕರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಕಮಲ ಚಂದ್ರಶೇಖರ್ ರವರು ದಿನಾಂಕ 30/4/2026 ರಂದು ನಿವೃತ್ತಿಗೊಂಡಿದ್ದು, ಇವರನ್ನು ವಿಟ್ಲ ಅಂಚೆ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
ಸಮಾರಂಭ ದ ಅಧ್ಯಕ್ಷತೆಯನ್ನು ವಿಟ್ಲ ಅಂಚೆ ಪಾಲಕರಾದ ಶ್ರೀಮತಿ ಶಿವಕುಮಾರಿ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಉಪ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ನಾಗರಾಜ್ ಹಾಗೂ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ ಬಾಲಕೃಷ್ಣ ನಾಯ್ಕ್ ರವರು ಆಗಮಿಸಿದರು.
ಹರೀಶ್ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು ಹಾಗೂ ಅಂಚೆ ಸಹಾಯಕರಾದ ಚಿದಾನಂದ ಪೂಜಾರಿ ವಂದಿಸಿದರು.
- Advertisement -








