Thursday, July 23, 2026
spot_imgspot_img
spot_imgspot_img

ದೋಸೆ ತಿನ್ನುವಾಗ ಕಾಲು ತಾಗಿತೆಂಬ ಕಾರಣಕ್ಕೆ ವ್ಯಕ್ತಿಯ ಭೀಕರ ಹತ್ಯೆ..! ಆರೋಪಿಗಳ ಬಂಧನ

- Advertisement -
- Advertisement -

ಬೆಂಗಳೂರು: ಕಾಲು ಟಚ್ ಆಯಿತೆಂಬ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಶಿಕುಮಾ‌ರ್ ಕೊಲೆಯಾದ ವ್ಯಕ್ತಿ. ಮಂಜುನಾಥ್ ಮತ್ತು ಭಾಗ್ಯರಾಜ್ ಕೊಲೆಗೈದ ಆರೋಪಿಗಳು.

ಮಾ. 2 ರಂದು ಶಿವನಹಳ್ಳಿ ಪ್ರದೇಶದ ಹೋಟೆಲ್ ನಲ್ಲಿ ಶಶಿಕುಮಾರ್ ದೋಸೆ ತಿನ್ನುತ್ತಿದ್ದ. ಮಂಜುನಾಥ್ ಸಹ ಅದೇ ಹೋಟೆಲ್ ಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ಕುಮಾರ್ ತುಳಿದಿದ್ದಾನೆ. ಇದೇ ವಿಚಾರ ಜಗಳಕ್ಕೆ ಕಾರಣವಾಗಿದ್ದು, ಮಂಜುನಾಥ್ ತನ್ನ ಸಹೋದರ ಭಾಗ್ಯರಾಜ್ ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಇಬ್ಬರು ಶಶಿಕುಮಾರ್ ಜೊತೆ ಜಗಳವಾಡಿದ್ದಾರೆ ಎನ್ನಲಾಗಿದೆ.

ರೊಚ್ಚಿಗೆದ್ದ ಭಾಗ್ಯರಾಜ್, ಶಶಿಕುಮಾರ್ ಕತ್ತಿಗೆ ಚಾಕು ಇರಿದು ಕೊಂದೇ ಬಿಟ್ಟಿದ್ದಾರೆ. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!