ಟೆಂಡರ್‌ದಾರ ಮಹೇಶ್ ದಾಸ್ ಪಟ್ಟಣ ಪಂಚಾಯತ್‌ನ ಮುಂದಿನ ಯಾವುದೇ ಟೆಂಡರ್‌ನಲ್ಲಿ ಭಾಗವಹಿಸುವಂತಿಲ್ಲ..!
ಸರ್ವಾನುಮತದಿಂದ ಸಭೆಯಲ್ಲಿ ನಿರ್ಣಯ..!




ವಿಟ್ಲ: ಪಟ್ಟಣ ಪಂಚಾಯತ್‌ನ ಸಭಾಂಗಣದಲ್ಲಿ ಅಧ್ಯಕ್ಷರು ಕರುಣಾಕರ ನಾಯ್ತೊಟ್ಟುರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ 3 ಜನ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ನಡವಳಿ ಸಂಖ್ಯೆ 221 ರಡಿ, ವಿಟ್ಲ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವರ ಜಾತ್ರೆ ಸಂದರ್ಭದಲ್ಲಿನ ವ್ಯಾಪಾರ ಮಳಿಗೆಗಳ ಏಲಂ ಕುರಿತಾಗಿ ಚರ್ಚೆ ನಡೆಯಿತು. ಮಹೇಶ್ ದಾಸ್ ರವರು ವಿಟ್ಲ ಪಟ್ಟಣ ಪಂಚಾಯತ್ ನಿಂದ ನಿಗಧಿಪಡಿಸಲಾದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಿ ವ್ಯಾಪಾರಸ್ಥರಿಗೆ ವಂಚನೆ ಮಾಡಿರುವ ದೂರಿನ ಬಗ್ಗೆ, ಹಾಗೂ ಟೆಂಡರ್ ದಾರರು ವ್ಯಾಪಾರಸ್ಥರ ಮೇಲೆ ಮಾಡಿರುವ ಪ್ರತ್ಯಾರೋಪದ ಬಗ್ಗೆ, ವಿಚಾರಣೆ ನಡೆಸಲು ವಿಚಾರಣೆಗಾಗಿ ಮೂರು ಬಾರಿ ನೋಟೀಸ್ ಗಳನ್ನು ನೀಡಿದ್ದರೂ ಕೂಡ ವ್ಯಾಪಾರಸ್ಥರು ಮಾತ್ರ ಖುದ್ದಾಗಿ ಭಾಗವಹಿಸಿ ಟೆಂಡರ್ ದಾರರು ಖುದ್ದಾಗಿ ಹಾಜರಾಗಿರಲಿಲ್ಲ.
ವ್ಯಾಪಾರಸ್ಥರಿಗೆ ಹೆಚ್ಚುವರಿ ಹಣ ವಸೂಲಿ ಮಾಡಿ ವಂಚನೆ ಮಾಡಿರುವ ಬಗ್ಗೆ, ವ್ಯಾಪಾರಸ್ಥರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಹಾಗೂ ಟೆಂಡರ್ ದಾರರು ಟೆಂಡರ್ ಷರತ್ತುಗಳನ್ನು ಉಲ್ಲಂಘಣೆ ಮಾಡಿರುವುದು ಹಾಗೂ ಜಾತ್ರೆ ಟೆಂಡರ್ ಅವಧಿ ಮುಗಿದ ನಂತರ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವುದು ಟೆಂಡರ್ ದಾರರ ಜವಾಬ್ದಾರಿಯಾಗಿದ್ದು ಅಂಗಡಿಗಳನ್ನು ತೆರವುಗೊಳಿಸದೆ ವ್ಯಾಪಾರ ಮುಂದುವರಿಸಿರುವುದು ದಾಖಲೆಗಳಲ್ಲಿ ಕಂಡುಬಂದಿರುವುದರಿಂದ ಟೆಂಡರ್ ದಾರರಾದ ಮಹೇಶ್ ದಾಸ್ ರವರನ್ನು ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಮುಂದಿನ ಯಾವುದೇ ಟೆಂಡರ್ ನಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಗೆ ಸೇರಿಸಲು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು.








