- Advertisement -
- Advertisement -

ಬೆಂಗಳೂರು, ಮೇ 10: ಮನೆಯ ಕಾಂಪೌಂಡ್ ಗೋಡೆ ಮತ್ತು ಅದಕ್ಕೆ ಜೋಡಿಸಲಾದ ಕಬ್ಬಿಣದ ಗೇಟ್ ಕುಸಿದು ಬಿದ್ದು, ಐದು ವರ್ಷದ ಬಾಲಕಿ ಸಾವನ್ನಪ್ಪಿದರೆ, ಮತ್ತೋರ್ವ ಬಾಲಕಿ ಗಾಯಗೊಂಡಿರುವ ಘಟನೆ ಇಲ್ಲಿನ ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಕಾನಗರದಲ್ಲಿ ನಡೆದಿದೆ. ಗೌಸಿಯಾ(5) ಸಾವನ್ನಪ್ಪಿದ ಬಾಲಕಿ ಎಂದು ಗುರುತಿಸಲಾಗಿದೆ.
ಈ ಘಟನೆಯಲ್ಲಿ ಆರು ವರ್ಷದ ಬಾಲಕಿ ಸುಮಯ್ಯಾ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೇ 8ರಂದು ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಸುಮಾರು 12 ವರ್ಷಗಳ ಹಿಂದೆ ಮನೆ ಕಾಂಪೌಂಡ್ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಈ ಸಂಬಂಧ ಚಿಕ್ಕಬಾಣಾವರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.ಮೃತಪಟ್ಟ ಬಾಲಕಿ ತಂದೆ ಇಮಾಮ್ ಹಣ್ಣು ಮಾರಾಟ ಮಾಡುತ್ತಿದ್ದರೆ, ತಾಯಿ ರಮೀಜಾ ಗೃಹಿಣಿಯಾಗಿದ್ದಾರೆ. ಆರು ತಿಂಗಳಿಂದಷ್ಟೇ ದ್ವಾರಕನಗರಕ್ಕೆ ದಂಪತಿ ಬಾಡಿಗೆಗೆ ಬಂದಿದ್ದರು.
- Advertisement -








