Thursday, July 23, 2026
spot_imgspot_img
spot_imgspot_img

NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಜಸ್ಥಾನ ಪೊಲೀಸರ ಮಾಹಿತಿಯ ಆಧಾರದಲ್ಲಿ ಆರೋಪಿಯನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ ಎಂದು ನಾಸಿಕ್ ನಗರದ ಉಪ ಪೊಲೀಸ್‌ ಆಯುಕ್ತ ಕಿರಣ್ ಕುಮಾ‌ರ್ ಚವ್ಹಾಣ್‌ ತಿಳಿಸಿದ್ದಾರೆ.“ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ವೇಶ ಬದಲಿಸಿಕೊಂಡಿದ್ದ. ಇದರಿಂದ ಆರಂಭದಲ್ಲಿ ಆತನ ಪತ್ತೆಗೆ ತೊಂದರೆಯಾಗಿತ್ತು. ಆದರೆ ತಾಂತ್ರಿಕ ಮಾಹಿತಿಯ ನೆರವಿನಿಂದ ಕೊನೆಗೆ ಆತನನ್ನು ಪತ್ತೆಹಚ್ಚಲಾಯಿತು” ಎಂದು ಅವರು ಹೇಳಿದ್ದಾರೆ.

ಆರೋಪಿ ನಾಸಿಕ್ ಜಿಲ್ಲೆಯ ನಂದಗಾಂವ್‌ ಗ್ರಾಮದ ನಿವಾಸಿಯಾಗಿದ್ದು, ಬಿಎಎಂಎಸ್ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ರಾಜಸ್ಥಾನ ಪೊಲೀಸರು ನಾಸಿಕ್‌ಗೆ ಬಂದ ಬಳಿಕ ಆರೋಪಿಯನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!