Friday, July 24, 2026
spot_imgspot_img
spot_imgspot_img

ಜೀವ ಉಳಿಸಿ ಹೆತ್ತವರಿಗೆ ಸಾಂತ್ವನ ಕೊಟ್ಟ ಡಾ.ಬಶೀರ್ ವಿ.ಕೆ ವಿಟ್ಲ

- Advertisement -
- Advertisement -

“ವೈದ್ಯೋ ನಾರಾಯಣೋ ಹರಿ” ಅಗೋಚರ ಯಂತ್ರ “ಮಾನವ ದೇಹ” ವನ್ನು ಮತ್ತೆ ಸಶಕ್ತವಾಗಿ ಮಾಡುವ ದೇವರು ವೈದ್ಯರು. ಯೋಚಿಸುವಾಗಲೆ ಮ್ಮೈ ಜುಮ್ಮೆನ್ನುತ್ತದೆ. ಅಸಂಖ್ಯಾತ ನರಗಳು, ಎಲುಬುಗಳು, ಸೃಷ್ಟಿಯಿಂದ ಸಾವಿನ ವರೆಗೂ ನಿಶ್ಚಲ ವಾಗದೆ ನಡೆಯಬೇಕಾದ ಕೆಲವು ದೇಹದೊಳಗಿನ ಯಂತ್ರಗಳು ಅಬ್ಬಬ್ಬಾ ಇವೆಲ್ಲವುಗಳ ಕಾರ್ಯಗಳ ಜತೆ ನಿಶ್ಕ್ರೀಯ ಗೊಳ್ಳುತಿರುವ ಭಾಗವನ್ನು ಉಳಿಸಿ ಚಲನೆಗೆ ತಂದ ವೈಧ್ಯರೆಲ್ಲರಿಗೆ “ಹ್ಯಾಟ್ಸ್ ಆಫ್” ಎನ್ನಲೇಬೇಕು.

ಜನಪ್ರಿಯ ಆಸ್ಪತ್ರೆ ಹಾಸನದ ರೂವಾರಿ , ಅಸಂಖ್ಯಾತ ಬಡವರಿಗೆ ಆರೋಗ್ಯ ನೀಡಿದ ಡಾ.ಬಶೀರ್ ವಿ. ಕೆ ಯವರ ಮತ್ತು ತಂಡದ ಹಗಲು ರಾತ್ರಿಯ ಸಾಧನೆಗೆ ಭಗವಂತನ ಆಶೀರ್ವಾದದಿಂದ ನಿಶ್ಚಲವಾಗಿ ಬಿಡುವ ಜೀವವೊಂದಕ್ಕೆ ಮರುಸೃಷ್ಟಿ ನೀಡಿದ್ದು ನಿಜವಾಗಲೂ ಪ್ರಶಂಸನೀಯ. ಹಾಸನದ ಜನತೆಯಲ್ಲ ಸಮಸ್ತ ಮಾನವ ಸಂಕುಲ ಇವರ ಸಾಧನೆಗೆ ತಲೆಬಾಗಲೇ ಬೇಕು.

ನಡೆದಿದಿಷ್ಟೆ:- ಹಾಸನದ ಅಪಘಾತವೊಂದರಲ್ಲಿ ತಲೆಬುರುಡೆ ಪುಡಿಯಾಗಿ, ಮೆದುಳು ಹೊರಬಂದು ಸಾವಿನ ಅಂಚಿನಲ್ಲಿದ್ದ ಲಿಖಿತ್ ಎಂಬ ಯುವಕನಿಗೆ ಹಾಸನದ ಜನಪ್ರಿಯ ಆಸ್ಪತ್ರೆಯು, ಡಾ.ಬಶೀರ್ ವಿ. ಕೆ ಯವರನ್ನೊಳ ಗೊಂಡ ಯಶಸ್ವಿ ವೈದ್ಯರ ತಂಡವು ಯಶಸ್ವಿ ಸರ್ಜರಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸುವ ಮೂಲಕ ಮರುಜನ್ಮ ನೀಡಿದೆ. ಕೇವಲ ಶೆ. 1ರಷ್ಟು ಬದುಕುಳಿಯುವ ಸಾಧ್ಯತೆ ಇದ್ದ ರೋಗಿಯನ್ನು ಉಳಿಸಿ ಆತನ ಕುಟುಂಬದ ಪ್ರೀತಿ, ಕೃತಜ್ಞತೆ ಗಳಿಸಿದ್ದಾರೆ. ಇಂತಹ ಹಲವಾರು ಸೇವೆಗಳ ರೂವಾರಿಗಳು ಹಾಸನ , ಮಂಗಳೂರು, ವಿಟ್ಲ ಪ್ರದೇಶದಲ್ಲಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ಎನ್ನುವುದಕ್ಕೆ ಹೆಮ್ಮೆಯೆನಿಸುತ್ತದೆ. ವಿಟ್ಲ ಪರಿಸರದಲ್ಲಿ ಬೆಳೆದು ಓಡಾಡಿ, ವಿಠಲ ವಿದ್ಯಾಸಂಸ್ಥೆಯಲ್ಲಿ ಕಲಿತು ಇಂದು ವೈದ್ಯವೃತ್ತಿಯ ಸೇವೆಗೆ ನ್ಯಾಯ ಕೊಟ್ಟ ಡಾ.ಬಶೀರ್ ವಿ. ಕೆ ವಿಟ್ಲದ ಹೆಮ್ಮೆಗೆ ಮತ್ತೊಂದು ಗರಿ ಇರಿಸಿದ್ದಾರೆ.

- Advertisement -

Related news

error: Content is protected !!