Thursday, May 2, 2024
spot_imgspot_img
spot_imgspot_img

ಕೇಪು : ಕಲ್ಲಂಗಳ ಕೇಪು ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

- Advertisement -G L Acharya panikkar
- Advertisement -

ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸದೆ ಉತ್ತಮ ರೀತಿಯಲ್ಲಿ ಅವರನ್ನು ಸಲಹಲು ಸಹಾಯವಾಗುವ ಮೌಲ್ಯ ಶಿಕ್ಷಣ ಇಂದು ಶಾಲೆಗಳಲ್ಲಿ ಸಿಗಬೇಕು: ಶಾಸಕ ಅಶೋಕ್ ಕುಮಾರ್ ರೈ

ಕೇಪು : ಸರಕಾರಿ ಪ್ರೌಢಶಾಲೆ ಕಲ್ಲಂಗಳ ಕೇಪು ಇಲ್ಲಿ ಶಾಲಾ ವಾರ್ಷಿಕೋತ್ಸವವು ಡಿ. 23 ರಂದು ಬಹಳ ಅದ್ದೂರಿಯಾಗಿ ನಡೆಯಿತು.

ರಾಘವ ಸಾರಡ್ಕ ಅಧ್ಯಕ್ಷರು ಗ್ರಾಮ ಪಂಚಾಯತ್ ಕೇಪು ಇವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ ‘ಮೌಲ್ಯ ಶಿಕ್ಷಣ ಇಂದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ತುಂಬಾ ಅತ್ಯಗತ್ಯ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸದೆ ಉತ್ತಮ ರೀತಿಯಲ್ಲಿ ಅವರನ್ನು ಸಲಹಲು ಸಹಾಯವಾಗುವ ಉತ್ತಮ ಶಿಕ್ಷಣ ಇಂದು ಶಾಲೆಗಳಲ್ಲಿ ಸಿಗಬೇಕು, ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಇಂತಹ ಅಂಶಗಳನ್ನು ಮೈ ಗೂಡಿಸಿಕೊಂಡರೆ ಮುಂದೆ ಸಮಾಜದಲ್ಲಿ ನಡೆಯುವ ಅನೇಕ ಸಮಸ್ಯೆಗಳನ್ನು ತಡೆಹಿಡಿಯಬಹುದು. ಉತ್ತಮವಾಗಿ ನವೀಕರಣಗೊಂಡಿರುವ ಈ ಶಾಲಾ ವೇದಿಕೆಯಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆಯುವಂತಾಗಲಿ’ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಪಂಚಾಯತ್ ಸದಸ್ಯರುಗಳಾದ ಜಗಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ ಗೌಡ , ವಿಶಾಲಾಕ್ಷಿ , ಮೋಹಿನಿ ಹಾಗೂ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರಿಜ ಎನ್ ಗೋವಿಂದರಾಯ್ ಶೆಣೈ , ರಾಧಾಕೃಷ್ಣ ಚೆಲ್ಲಡ್ಕ, ಅಬ್ದುಲ್ ಕರೀಂ ಮತ್ತಿತರರು ಉಪಸ್ಥಿತರಿದ್ದರು.

ನವೀಕರಿಸಲಾದ ರಂಗವೇದಿಕೆಗೆ ಸಮಿತಿಯ ಅಭಿಪ್ರಾಯದಂತೆ ಕಲ್ಲಂಗಳ ಗುತ್ತು ಶ್ರೀ ವಾಸಪ್ಪ ಪೆರ್ಗಡೆ ರಂಗವೇದಿಕೆ ಎಂದು ಹೆಸರಿಡಲಾಗಿದೆ. ಇವರ ಕುಟುಂಬದ ಸದಸ್ಯರ ವಿಶೇಷ ಧನ ಸಹಾಯ ಈ ಮಹಾನ್ ಕಾರ್ಯಕ್ಕೆ ದೊರೆತಿದ್ದು ಕುಟುಂಬದವರ ಪರವಾಗಿ ಸತೀಶ್ ರೈ ಮುಂಬೈ ಉದ್ಯಮಿ ಇವರನ್ನು ಸನ್ಮಾನಿಸಲಾಯಿತು.

ಶಾಲೆಯ ಸ್ಥಾಪನೆ ಹಾಗೂ ಬೆಳವಣಿಗೆಗೆ ಸಹಕರಿಸಿದ ಹಿರಿಯರಾದ ದೇವದಾಸ ರೈ, ಶ್ರೀನಿವಾಸ ರೈ ಹಾಗೂ ರಾಧಾಕೃಷ್ಣ ಪೈ ಇವರನ್ನು ಸನ್ಮಾನಿಸಲಾಯಿತು.

ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಸಂತೋಷ್ ಶೆಟ್ಟಿ ಇವರನ್ನು ಸೇರಿದಂತೆ ವಿಶೇಷ ಸಹಕಾರ ನೀಡಿದವರನ್ನು ಹಾಗೂ ಎಸ್ ಎಸ್ ಎಲ್ ಸಿ ಸಾಧಕರನ್ನು ಸನ್ಮಾನಿಸಲಾಯಿತು.

ರಂಗವೇದಿಕೆ ನವೀಕರಣ ಸಮಿತಿಯ ಅಧ್ಯಕ್ಷರೂ ವಾಸಪ್ಪ ಪೆರ್ಗಡೆಯವರ ಸುಪುತ್ರರೂ ಆದ ಕಲ್ಲಂಗಳ ಪ್ರಕಾಶ್ ರೈ ಅವರು ದೇವದಾಸ ರೈ ಅವರ ಕುರಿತು ಹಾಗೂ ಬಾಲಕೃಷ್ಣ ಕಾರಂತರು ರಾಧಾಕೃಷ್ಣ ಪೈಗಳ ಕುರಿತು ಹಾಗೂ ಬಾಲಚಂದ್ರ ಕಟ್ಟೆ ಇವರು ಶ್ರೀನಿವಾಸ ರೈ ಗಳ ಬಗ್ಗೆ ಅಭಿನಂದನಾ ಭಾಷಣ ಮಾಡಿದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಬೇಂಗ್ರೋಡಿ ಇವರುಸ್ವಾಗತಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಅಡಿಯಲ್ಲಿ ಈ ಕಾರ್ಯಕ್ಕೆ ರೂಪಾಯಿ 1 ಲಕ್ಷ ಅನುದಾನ ದೊರೆತಿದ್ದು ಅವರನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

SSLC ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ರಮೇಶ ಎಂ ಬಾಯಾರು (ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು ) ಇವರು ಸ್ಥಾಪಿಸಿದ ದತ್ತಿನಿಧಿಯನ್ನು ಅವರಿಂದಲೇ ವಿತರಿಸಲಾಯಿತು.

ಮುಖ್ಯ ಶಿಕ್ಷಕಿ ಮಾಲತಿ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ವರದಿ ವಾಚಿಸಿದರು.

ಹಿರಿಯ ಶಿಕ್ಷಕ ಲಕ್ಷ್ಮಣ ಟಿ ನಾಯಕ್ ವಂದಿಸಿ, ಸ.ಶಿ.ರಾದ ರಮೇಶ ಡಿ ಕಾರ್ಯಕ್ರಮ ನಿರ್ವಹಿಸಿದರು

ಶಿಕ್ಷಕಿಯರಾದ ಗೌರಿದೇವಿ, ಪೂರ್ಣಿಮಾ ಎಸ್.ಕೆ, ಶಾಂತಲಾ, ಮಾಲಿನಿ, ಶಕುಂತಳಾ , ಪುಷ್ಪ ಪಿ ಹಾಗೂ ಪ್ರಮೀಳಾ ಪ್ರಶಸ್ತಿ ವಿಜೇತರ ವಿವರಗಳನ್ನು ವಾಚಿಸಿದರು. ಭವ್ಯ ಹಾಗೂ ವಿದ್ಯಾ ಸಹಕರಿಸಿದರು

- Advertisement -

Related news

error: Content is protected !!