Wednesday, July 22, 2026
spot_imgspot_img
spot_imgspot_img

1,000 ವರ್ಷ ಹಳೆಯ ಚೋಳರ ಕಾಲದ ತಾಮ್ರ ಫಲಕಗಳನ್ನು ಭಾರತಕ್ಕೆ ಹಿಂದಿರುಗಿಸಿದ ನೆದರ್ಲೆಂಡ್ಸ್

- Advertisement -
- Advertisement -

ಆಂಸ್ಟರ್‌ಡ್ಯಾಮ್: ನೆದರ್ಲೆಂಡ್ಸ್ ಸಾವಿರ ವರ್ಷಗಳ ಹಿಂದಿನ ಚೋಳರ ಕಾಲದ ತಾಮ್ರದ ಫಲಕಗಳನ್ನು ಭಾರತಕ್ಕೆ ಹಿಂದಿರುಗಿಸಿದೆ. ಇದು ಭಾರತದ ರಾಜತಾಂತ್ರಿಕ ವ್ಯವಸ್ಥೆಗೆ ಸಂದ ಜಯ ಎಂದು ಬಣ್ಣಿಸಲಾಗುತ್ತಿದೆ.

18ನೇ ಶತಮಾನದಲ್ಲಿ ನಾಗಪಟ್ಟಣಂ ಡಚ್ ನಿಯಂತ್ರಣದಲ್ಲಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಕ್ರಿಶ್ಚಿಯನ್ ಮಿಷನ್‌ನೊಂದಿಗೆ ಸಂಬಂಧ ಹೊಂದಿದ್ದ ಫ್ಲೋರೆಂಟಿಯಸ್ ಕ್ಯಾಂಪರ್ ಈ ಫಲಕಗಳನ್ನು ನೆದರ್‌ಲ್ಯಾಂಡ್ಸ್ಗೆ ಕೊಂಡೊಯ್ದಿದ್ದರು. ಇದೀಗ ಈ ಫಲಕಗಳನ್ನು ವಾಪಸ್ ತರಿಸಿಕೊಳ್ಳಲು ಭಾರತ 2012 ರಿಂದ ನಿರಂತರವಾಗಿ ಪ್ರಯತ್ನ ನಡೆಸಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಲು ನೆದರ್ಲೆಂಡ್ಸ್ಗೆ ಭೇಟಿ ನೀಡಿದ್ದರು. ಈ ಹೊತ್ತಿನಲ್ಲೇ ಭಾರತದ ಐತಿಹಾಸಿಕ ಫಲಕಗಳನ್ನು ಹಿಂತಿರುಗಿಸಿದೆ.ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಚೋಳರ ಕಾಲದ ತಾಮ್ರ ಫಲಕಗಳು ಮರಳಿ ಭಾರತಕ್ಕೆ ಬರುತ್ತಿವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಸಂತೋಷದ ಕ್ಷಣ. 11 ನೇ ಶತಮಾನದ ಚೋಳ ತಾಮ್ರ ಫಲಕಗಳನ್ನು ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ತರಲಾಗುವುದು ಎಂದು ಬರೆದುಕೊಂಡಿದ್ದಾರೆ. ಈ ತಾಮ್ರದ ಫಲಕಗಳು 30 ಕೆಜಿ ತೂಕವಿದ್ದು, 21 ಫಲಕಗಳನ್ನು ಒಳಗೊಂಡಿದೆ. ಅವುಗಳನ್ನು ರಾಜ ಚೋಳ ಮುದ್ರೆಯನ್ನು ಹೊಂದಿರುವ ಕಂಚಿನ ಉಂಗುರದಿಂದ ಜೋಡಿಸಲಾಗಿದೆ. ಈ ಫಲಕಗಳ ಒಂದು ಭಾಗದಲ್ಲಿ ಸಂಸ್ಕೃತ ಮತ್ತು ಇನ್ನೊಂದು ಭಾಗದಲ್ಲಿ ತಮಿಳಿನಲ್ಲಿ ಬರೆಯಲಾಗಿದೆ.

- Advertisement -

Related news

error: Content is protected !!