Thursday, July 23, 2026
spot_imgspot_img
spot_imgspot_img

ಅಚ್ಚರಿ ಮೂಡಿಸಿದ “ಬನ “ ಚಿತ್ರದ ಪೋಸ್ಟರ್

- Advertisement -
- Advertisement -

ಖ್ಯಾತ “ರೈ ಸ್ಟಾರ್ ” ಫೇಸ್ ರಿವೀಲ್ ಆಗುತ್ತಾ?

ನಿರೀಕ್ಷೆ ಮೂಡಿಸಿರುವ ತುಳು ಮತ್ತು ಕನ್ನಡದಲ್ಲಿ ತಯಾರಾಗುತ್ತಿರುವ “ಬನ “ ಚಿತ್ರದ ಕೆನಡಾ ಪ್ರೀಮಿಯರ್ ಶೋ ನ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ free fire ನ ಜನಪ್ರೀಯ ಆಟಗಾರ ರೈ ಸ್ಟಾರ್ ಅವರ ಟಿ ಶರ್ಟ್ ಹೊಂದಿರುವ ಬೈಕ್ ಸವಾರನ ಚಿತ್ರವಿದೆ . ಇದರಲ್ಲಿ ವಿಶೇಷವೆಂದರೆ ಇದುವರೆಗೂ ತಾನು ಯಾರು ಎಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರೈ ಸ್ಟಾರ್ ತನ್ನ ಮುಖ ದರ್ಶನವನ್ನು ಕೋಟ್ಯಂತರ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ತೋರಿಸುತ್ತಾರೆಯೇ ಎಂಬ ಕುತೂಹಲ ಈ ಪೋಸ್ಟರ್ ಮೂಡಿಸಿದೆ.

ಚಿತ್ರ ಆಗಸ್ಟ್ ನಲ್ಲಿ ಕೆನಡಾ ಮತ್ತು ಬ್ಯಾಂಕಾಕ್ ನಲ್ಲಿ ಪ್ರೀಮಿಯರ್ ಗೊಳ್ಳಲಿದ್ದು ಭಾರತದಲ್ಲಿ ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ . ಚಿತ್ರವನ್ನು ಧರ್ಮ ದೈವ, ಧರ್ಮ ಚಾವಡಿ ಖ್ಯಾತಿಯ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನ ಮಾಡಿದ್ದು ಈಶಿ ಪ್ರೊಡಕ್ಷನ್ ಮೂಲಕ ಮನೋಹರ್ ರೈ ವೈಪಾಲ ನಿರ್ಮಾಣ ಮಾಡಿದ್ದಾರೆ. ಸುದ್ದಿ ಕ್ಷೇತ್ರದ ಜಯಪ್ರಕಾಶ್ ಶೆಟ್ಟಿ ಉಪ್ಪಳ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

- Advertisement -

Related news

error: Content is protected !!