Wednesday, July 22, 2026
spot_imgspot_img
spot_imgspot_img

ಹಕ್ಕು ಪತ್ರಕ್ಕಾಗಿ ಪ್ರತಿಭಟನೆ

- Advertisement -
- Advertisement -

ಬಡಕುಟುಂಬದ ಹೋರಾಟಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಾಥ್

ಬಂಟ್ವಾಳ: ಪುಣಚ ಗ್ರಾಮದ ಪರಿಶಿಷ್ಟ ಪಂಗಡದ (ST) ಅರ್ಹ ಕುಟುಂಬಗಳಿಗೆ ತಕ್ಷಣವೇ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಗಿರಿಧರ್ ನಾಯ್ಕ್ ನೇತೃತ್ವದಲ್ಲಿ ಪುಣಚ ಗ್ರಾಮದ 3 ಕುಟುಂಬಗಳು ಕಳೆದ ಮೂರು ದಿನಗಳಿಂದ ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಪುತ್ತೂರು ಮತ್ತು ಬಂಟ್ವಾಳದ ಬಿಜೆಪಿ ನಿಯೋಗವು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸಾಥ್ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಯಾವ ಹೋರಾಟಕ್ಕೆ ಅವರು ನಿಂತಿದ್ದಾರೆ ಅವರಿಗೆ ಹಕ್ಕು ಪತ್ರವನ್ನು ಶೀಘ್ರವಾಗಿ ಕೊಡುವ ಕೆಲಸವನ್ನು ಮಾಡಬೇಕು, ಪಿತೂರಿ ಷಡ್ಯಂತ್ರವನ್ನು ಮಾಡಿ ಅವರ ಹಕ್ಕು ಪತ್ರವನ್ನ ಕಸಿಯುವ ಪ್ರಯತ್ನವನ್ನು ಮಾಡಿದ್ರೆ ಈ ಹೋರಾಟ ರಾಜ್ಯ ಮತ್ತು ಜಿಲ್ಲಾಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ , ನಮ್ಮ ಪಾರ್ಟಿ ಹುಟ್ಟಿರುವುದೇ ಇದಕ್ಕೆ, ನಮ್ಮ ಪಾರ್ಟಿ ಇರುವಂತಹದು ಅತ್ಯಂತ ತಳಮಟ್ಟದ ವ್ಯಕ್ತಿಗೆ ನ್ಯಾಯ ಕೊಡಿಸಲು, ಅವನ ಸಾಮಾಜಿಕ ಅರ್ಥಿಕ ಸ್ಥಿತಿಯನ್ನ ಎತ್ತಿ ಹೀಡಿಯಲು ಅಂತ ಹೇಳಿ ಈ ಬಡಕುಟುಂಬದ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

- Advertisement -

Related news

error: Content is protected !!