Saturday, September 12, 2026
spot_imgspot_img
spot_imgspot_img

NTTC ಕೋರ್ಸ್ ಪೂರ್ಣಗೊಳಿಸಿದ ನರ್ಸರಿ ಶಿಕ್ಷಕಿಯರ ಘಟಿಕೋತ್ಸವ ಸಮಾರಂಭ-ಆದರ್ಶ ಶಿಕ್ಷಕರಾಗೋಣ: ಮಗುವಿನ ಮನಸ್ಸಿನಲ್ಲಿ ಉಳಿಯುವ ಶಿಕ್ಷಕರಾಗಿ — ಡಾ. ಶೇಖ್ ಬಾವ ಹಾಜಿ

- Advertisement -
- Advertisement -

ಮಂಗಳೂರು: ಶಿಕ್ಷಣವು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಶಿಕ್ಷಕರು ಕೇವಲ ಪಾಠ ಹೇಳುವವರಾಗದೆ ಮಕ್ಕಳ ಮನಸ್ಸಿನಲ್ಲಿ ಸದಾ ಉಳಿಯುವ ಆದರ್ಶ ಶಿಕ್ಷಕರಾಗಲು ಶ್ರಮಿಸಬೇಕು ಎಂದು ಅಲ್ ತವಾಮ್ ಗ್ರೂಪ್‌ನ ನಿರ್ದೇಶಕರಾದ ಡಾ. ಶೇಖ್ ಬಾವ ಹಾಜಿ ಹೇಳಿದರು.ಅವರು ಮಂಗಳೂರು ನಗರದ ಕಂಕನಾಡಿಯ Alzayyan International School ಆಡಿಟೋರಿಯಂನಲ್ಲಿ ನಡೆದ Bliss London Teachers Academy ವತಿಯಿಂದ ಆಯೋಜಿಸಲಾದ NTTC ಕೋರ್ಸ್ ಪೂರ್ಣಗೊಳಿಸಿದ ನರ್ಸರಿ ಶಿಕ್ಷಕಿಯರ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿಯ ಡೈರೆಕ್ಟರ್ ಉಮರುಲ್ ಫಾರೂಕ್ ರಝಾ ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಹಾಫಿಝ್ ಅನಸ್ ಅಹ್ಸನಿ, ಅಲ್‌ಝಯಾನ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕರಾದ ಇಲ್ಯಾಸ್ ಹಾಗೂ ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿಯ ತರಬೇತುದಾರರಾದ ಅಬ್ದುಸ್ಸಮದ್ ಅದನಿ, ಅಮ್ರಿನ್, ಸುಮಯ್ಯ ರಿಫಾ ಮತ್ತು ರಫಾ ಮರ್ಯಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗಿದ್ದು, ಶಿಕ್ಷಣದ ಮಹತ್ವ, ಮಹಿಳಾ ಸಬಲೀಕರಣ ಹಾಗೂ ಉತ್ತಮ ಶಿಕ್ಷಕರ ಅಗತ್ಯತೆಯ ಕುರಿತು ಗಣ್ಯರು ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.ಸ್ವಾಗತ ಭಾಷಣವನ್ನು ಕುಮಾರಿ ನಝೀಫಾ ನೆರವೇರಿಸಿದರು. ಮಿನಾಝ್ ಹಾಗೂ ರೆಹನಾಝ್ ಕಾರ್ಯಕ್ರಮವನ್ನು ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿನಿಯರ ಸಾಧನೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಪೋಷಕರು, ಶಿಕ್ಷಕರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

- Advertisement -

Related news

error: Content is protected !!