Saturday, September 12, 2026
spot_imgspot_img
spot_imgspot_img

ಮೇ.28ಕ್ಕೆ ನಿಗದಿಯಾಗಿದ್ದ ಸಿಯುಇಟಿ ಯುಜಿ- 2026 ಪರೀಕ್ಷೆ ಮುಂದೂಡಿಕೆ

- Advertisement -
- Advertisement -

ಹೊಸದಿಲ್ಲಿ, ಮೇ 25: ಮೇ 28ರಂದು ನಡೆಯಲು ನಿಗದಿಯಾಗಿರುವ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ ಪದವಿ (ಸಿಯುಇಟಿ ಯುಜಿ) 2026 ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಂದೂಡಿದೆ.

ಆ ದಿನ ಎರಡು ಪಾಳಿಗಳಲ್ಲಿ ನಡೆಯಲಿರುವ ಪರೀಕ್ಷೆಯನ್ನು ಬಕ್ರೀದ್ ರಜೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ರವಿವಾರ ಹೊರಡಿಸಲಾಗಿರುವ ಸಾರ್ವಜನಿಕ ಪ್ರಕಟನೆಯೊಂದು ತಿಳಿಸಿದೆ.

ಪರೀಕ್ಷೆಯ ಮುಂದಿನ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಎನ್‌ಟಿಎ ಹೇಳಿದೆ.ಭಾರತ ಮತ್ತು ವಿದೇಶಗಳಲ್ಲಿರುವ ವಿವಿಧ ಕೇಂದ್ರಗಳಲ್ಲಿ ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ನಡೆಯುತ್ತಿರುವ ಸಿಯುಇಟಿ ಯುಜಿ 2026 ಪರೀಕ್ಷೆಗಳು ಮೇ 11ರಂದು ಆರಂಭಗೊಂಡಿದ್ದು, ಮೇ 31ರವರೆಗೆ ನಡೆಯಲಿವೆ.ಈ ಬಾರಿ ಪದವಿ ಪ್ರವೇಶ ಪರೀಕ್ಷೆಗಾಗಿ 15.68 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

- Advertisement -

Related news

error: Content is protected !!