- Advertisement -
- Advertisement -






ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317d ಮಂಗಳೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಆದ ಲಯನ್ ಯುಟಿ ಖಾದರ್ ರವರಿಗೆ ಜಿಲ್ಲೆಯ ಸಮಸ್ತ ಲಯನ್ಸ್ ಬಂಧುಗಳ ಪರವಾಗಿ ‘ರಾಜಕಾರಣದ ಅನರ್ಘ್ಯ ರತ್ನ’ ಗೌರವ ಬಿರುದು ನೀಡಿ ಸನ್ಮಾನಿಸಲಾಯಿತು.

ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಅರವಿಂದ ಶೆಣೈ ಯವರು ಸಭೆ ಅಧ್ಯಕ್ಷತೆಯನ್ನು ವಹಿಸಿ ಸಚಿವರನ್ನು ಗೌರವಿಸಿದರು ಮತ್ತು ಜಿಲ್ಲೆಯ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ರಾಜ್ಯಪಾಲರಾದ ದೇವದಾಸ್ ಭಂಡಾರಿ ಸಂಪುಟ ಕಾರ್ಯದರ್ಶಿ, ಕಾರ್ಯದರ್ಶಿ ಎಚ್ಆರ್ ಚಂದ್ರೇಗೌಡ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯರ್ ವಿಟ್ಲ ಹೆಚ್ಚುವರಿ ಕಾರ್ಯದರ್ಶಿ , ಚಂದ್ರಹಾಸ್ ರೈ, ಜಿಲ್ಲಾ ಸಂಪುಟದ ಪದಾಧಿಕಾರಿಗಳು, ಮಂಗಳಗಂಗೋತ್ರಿ ಕ್ಲಬ್ಬಿನ ಸದಸ್ಯರುಗಳು ಹಾಗೂ ಜಿಲ್ಲೆಯ ಲಯನ್ಸ್ ಸದಸ್ಯರುಗಳು ಉಪಸ್ಥಿತರಿದ್ದರು.
- Advertisement -








