Sunday, June 21, 2026
spot_imgspot_img
spot_imgspot_img

ಕೇಪು: ಪಟ್ಲ ಫೌಂಡೇಶನ್‌ ರಿ.ಮಂಗಳೂರು ಪ್ರಾಯೋಜಕತ್ವದಲ್ಲಿ, ಪಟ್ಲ ಫೌಂಡೇಶನ್‌ ವಿಟ್ಲ ಘಟಕದ ಸಹಯೋಗದೊಂದಿಗೆ 3ನೇ ವರ್ಷದ ಯಕ್ಷಧ್ರುವ ಉಚಿತ ಯಕ್ಷ ಶಿಕ್ಷಣ ಉದ್ಘಾಟನಾ ಸಮಾರಂಭ

- Advertisement -
- Advertisement -

ಕೇಪು: ಯಕ್ಷಧ್ರುವ ಉಚಿತ ಯಕ್ಷ ಶಿಕ್ಷಣ ಉದ್ಘಾಟನೆ ಜೂನ್ 20 ರಂದು ದ. ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿ ಪಟ್ಲ ಫೌಂಡೇಶನ್‌ ರಿ.ಮಂಗಳೂರು ಪ್ರಾಯೋಜಕತ್ವದಲ್ಲಿ, ಪಟ್ಲ ಫೌಂಡೇಶನ್‌ ವಿಟ್ಲ ಘಟಕದ ಸಹಯೋಗದೊಂದಿಗೆ 3ನೇ ವರ್ಷದ ಉಚಿತ ಯಕ್ಷಗಾನ ನಾಟ್ಯ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು.

ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ ಡಿ.ಎಂ. ಸಿ ಅಧ್ಯಕ್ಷರಾದ ವೆಂಕಟರಾಘವೇಂದ್ರ ಸ್ವಾಮಿ ಯವರು ವಹಿಸಿದ್ದರು. ಪಟ್ಲ ಫೌಂಡೇಶನ್ ವಿಟ್ಲ ಶಾಖೆಯ ಅಧ್ಯಕ್ಷರಾದ ಪೂವಪ್ಪ ಶೆಟ್ಟಿ ಅಳಿಕೆ ಇವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಪಟ್ಲ ಫೌಂಡೇಶನ್ ಮೂಲಕ ಯಕ್ಷಗಾನ ಪ್ರೋತ್ಸಾಹದೊಂದಿಗೆ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಶ್ಲಾಘಿಸಿದರು.

ಯಕ್ಷಗಾನ ಗುರುಗಳಿಗೆ ಗುರುಕಾಣಿಕೆ ನೀಡಿ ಸಾಂಕೇತಿಕವಾಗಿ ನಾಟ್ಯ ತರಗತಿಗಳನ್ನು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷರಾದ ಪೂವಪ್ಪ ಶೆಟ್ಟಿ ಅಳಿಕೆ, ರಾಧಾಕೃಷ್ಣ ಶೆಟ್ಟಿ ಚೆಲ್ಲಡಕ,ಜಗಜೀವನ್ ರಾಮ್ ಶೆಟ್ಟಿ, ತಾರನಾಥ ಆಳ್ವ, ಪ್ರಭಾಕರ ಶೆಟ್ಟಿ ಪಡಿಬಾಗಿಲು, ಬಾಲಕೃಷ್ಣ ಬೆಂಗ್ರೆಡಿ, ಯಕ್ಷ ಗುರುಗಳಾದ ಗಣೇಶ್ ಆಚಾರ್ಯ ಕುಂದ ಲಕೋಡಿ,ವೆಂಕಟರಾಘವೇಂದ್ರ ಸ್ವಾಮಿ, ಉಮೇಶ್ ಗೌಡ, ಟ್ರಸ್ಟಿ ಗಳು ಎಸ್.ಡಿ.ಎಂ.ಸಿ. ಸದಸ್ಯರು,, ಮುಖ್ಯ ಶಿಕ್ಷಕರು,ಶಿಕ್ಷಕವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿತು.

- Advertisement -

Related news

error: Content is protected !!