Saturday, June 27, 2026
spot_imgspot_img
spot_imgspot_img

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ; ನ್ಯಾಯಾಂಗ ಬಂಧನಕ್ಕೆ ಆದೇಶ

- Advertisement -
- Advertisement -

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆಯ 09/2005ನೇ ಪ್ರಕರಣದಲ್ಲಿ (ಐಪಿಸಿ ಕಲಂ 457, 380 ಹಾಗೂ 34) ಆರೋಪಿಯಾಗಿದ್ದ ತಮಿಳುನಾಡಿನ ತಿರುಣವೇಲಿ ನಿವಾಸಿ ಮಾಡ ಸ್ವಾಮಿ ಎಂಬಾತನು ಸುಮಾರು 16 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಆರೋಪಿಯನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ HC 826 ಹಾಗೂ HC 331 ಅವರು ಕೃಷ್ಣನಗರದಲ್ಲಿ ಪತ್ತೆಹಚ್ಚಿ ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!