




ಎರುಂಬು: ಶ್ರೀ ದಿವ್ಯಜ್ಯೋತಿ ಮಿತ್ರವೃಂದ ಎರುಂಬು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ಎರುಂಬು ಶ್ರೀ ವಿಷ್ಣುಮಂಗಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎರುಂಬುವಿನಲ್ಲಿ ಜರುಗಿತು.
ಎರುಂಬು ಶ್ರೀ ವಿಷ್ಣುಮಂಗಲ ದೇವರಿಗೆ ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಟೋಟ ಸ್ಪರ್ಧೆಗಳು ವಿಜೃಂಭಣೆಯಿಂದ ಜರಗಿತು. ಮಿತ್ರವೃಂದದ ಹಿರಿಯ ಸದಸ್ಯರಾದ ನಾರಾಯಣ ಎರುಂಬು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಪ್ರವೀಣ್ ಶೆಟ್ಟಿ ಮೈರ ಮಾತನಾಡಿ, ಕ್ರೀಡೆಯಲ್ಲಿ ಆಸಕ್ತಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯಂತಹ ಆಟೋಟ ಸ್ಪರ್ಧೆಗಳು ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತವೆ, ಸೌಹಾರ್ದಯುತ ಬದುಕು ಜನಜೀವನಕ್ಕೆ ನೆಮ್ಮದಿ ತರುತ್ತದೆ ಎಂದರು.
ಮಿತ್ರವೃಂದದ ಗೌರವಾಧ್ಯಕ್ಷರಾದ ಮೋಹನದಾಸ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ದುಬೈ ಉದ್ಯಮಿ ಹಾಗೂ ಕ್ರೀಡಾ ಪ್ರೇಮಿ ರಶೀದ್ ಮೈರ, ಹಿರಿಯ ಸದಸ್ಯರಾದ ಮಧುಸೂದನ್ ರೈ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಲಾಲ್ ಉಪಸ್ಥಿತರಿದ್ದರು.
ಬಳಿಕ ಅಂಗನವಾಡಿ ವಿದ್ಯಾರ್ಥಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ ಹಾಗೂ ಸಾರ್ವಜನಿಕ ಮಹಿಳೆಯರು ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಸತ್ಯಸಾಯಿ ವಿದ್ಯಾಸಂಸ್ಥೆಗಳು ಅಳಿಕೆಯ ಹರೀಶ್ ಮೈರ ಮಾತನಾಡಿ, ಒಮ್ಮತದ ಆಟಕೂಟಗಳು ಜನರನ್ನು ಸಹಬಾಳ್ವೆ ಮತ್ತು ಸಂಘಟನೆಯಿಂದ ಬದುಕುವಂತೆ ಪ್ರೇರೇಪಿಸುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂತಹ ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸುವುದು ಸಮಾಜದ ಆರೋಗ್ಯಕರ ಮತ್ತು ಸೌಹಾರ್ದಯುತ ಬದುಕಿಗೆ ಸಹಕಾರಿಯಾಗುತ್ತದೆ ಎಂದರು.

ಹಿರಿಯ ದೈಹಿಕ ಶಿಕ್ಷಕ ಮತ್ತು ಸಂಘದ ಕಾರ್ಯದರ್ಶಿ ಸುರೇಶ್ ವೈ.ಎಸ್, ದೀಪಕ್ ಅಳಿಕೆ, ಚಂದ್ರಹಾಸ ಪುಳಿತ್ತಡಿ, ನೀರಜಾ ಟೀಚರ್, ವಾಸಪ್ಪ ಕಲ್ಲದಂಬೆ, ಸವಿತಾ ಟೀಚರ್ ಹಾಗೂ ಇತರರು ತೀರ್ಪುಗಾರರಾಗಿ ಸಹಕರಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ವರ್ಷ ನೆರವೇರಿಸಿದರೆ, ರಾಧಾಕೃಷ್ಣ ಎರುಂಬು ನಿರೂಪಿಸಿದರು.








