





ಪುತ್ತೂರು: ಕಬಕ ಹೊಟೇಲೊಂದರಲ್ಲಿ ನಾವು ಉಪಹಾರ ಸೇವಿಸುವಾಗ ಹೊಟೇಲ್ ಬಂದ್ ಮಾಡುವಂತೆ ಬಂದ ಪೊಲೀಸರೊಂದಿಗೆ ವಾಗ್ವಾದ ಮಾಡಿಲ್ಲ. ವಿನಯ ಪೂರ್ವಕವಾಗಿ ಕಾನೂನಿನಲ್ಲಿ ಅವಕಾಶದ ಕುರಿತು ಕೇಳಿದ್ದೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ ಎಂದು ಉಜ್ವಲ್ ಪ್ರಭು ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಾವು ಗೆಳೆಯರೊಂದಿಗೆ ಹೊಟೇಲ್ ಗೆ ಹೋದದ್ದು ಹೌದು. ಅಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಹೊಟೇಲ್ ಬಂದ್ ಮಾಡಿ ಎಂದು ಹೇಳಿದ್ದರು. ಈ ಕುರಿತು ನಾವು ಪೊಲೀಸರಲ್ಲಿ ಬಡವರಿಗೊಂದು ನ್ಯಾಯವಾ? ಶ್ರೀಮಂತರಿಗೊಂದು ನ್ಯಾಯವಾ? ಎಂದು ಪೊಲೀಸರಲ್ಲಿ ವಿನಯಪೂರ್ವಕವಾಗಿ ಕೇಳಿ, ಈ ತರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೇಳಿದ್ದೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ ಎಂದು ಉಜ್ವಲ್ ಪ್ರಭು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಉದ್ಯಮದ ಏಳಿಗೆ ಸಹಿಸದ ರಾಜಕೀಯ ದುರೀಣರ ಕೆಲಸ: ನನ್ನ ಉದ್ಯಮದ ಏಳಿಗೆ ಸಹಿಸಲಾರದ ರಾಜಕೀಯ ದುರೀಣರು ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.








