- Advertisement -
- Advertisement -




ಉಡುಪಿ: ದೇವಾಲಯದ ಕೆರೆಗೆ ಬಿದ್ದು ಒಂಬತ್ತನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಡುಪಿ ನಗರದ ತೆಂಕಪೇಟೆಯಲ್ಲಿರುವ ವೆಂಕಟರಮಣ ದೇವಾಲಯದಲ್ಲಿ ನಡೆದಿದೆ. ದೇವಾಲಯದಲ್ಲಿ ನಡೆಯುತ್ತಿದ್ದ ಭಜನಾ ಸಪ್ತಾಹ ಕಾರ್ಯಕ್ರಮದ ವೇಳೆ ಘಟನೆ ಸಂಭವಿಸಿದೆ.
ಮೃತನನ್ನು ಕುಕ್ಕಿಕಟ್ಟೆ ನಿವಾಸಿ ಆದಿತ್ಯ ನಾಯಕ್(13) ಎಂದು ಗುರುತಿಸಲಾಗಿದೆ.
ಅಕ್ಕನ ಮಗನ ಒತ್ತಾಯದ ಮೇರೆಗೆ ಈಜಲು ಕೆರೆಗೆ ಇಳಿದಿದ್ದ ಆದಿತ್ಯನಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದ್ದು, ಸುಮಾರು 20 ಅಡಿ ಆಳದ ಕೆರೆಯಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ.
ಪೋಷಕರ ಮಾತನ್ನು ತಳ್ಳಿ ಹಾಕಿ ಈಜಲು ತೆರಳಿದ್ದ ಬಾಲಕ ದುರಂತಕ್ಕೀಡಾಗಿದ್ದಾನೆ. ಮುಳುಗುತಜ್ಞ ಈಶ್ವರ ಮಲ್ಪೆ ಅವರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
- Advertisement -








