
ಬಂಟ್ವಾಳ: ಬೊಳ್ಳಾಡು ಶ್ರೀ ಭಗವತೀ ಭಜನಾ ಸಮಿತಿ, ಎರುಂಬು ವತಿಯಿಂದ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಜನಾ ಮಹೋತ್ಸವ ಜುಲೈ 5, 2026ರಂದು ಭಗವತೀ ಕ್ಷೇತ್ರದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಯಲಿದೆ.ಕಾರ್ಯಕ್ರಮವು ಬೆಳಿಗ್ಗೆ 6.09ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಳ್ಳಲಿದ್ದು, ಬಳಿಕ ವಿವಿಧ ಭಜನಾ ತಂಡಗಳಿಂದ ದಿನವಿಡೀ ಭಕ್ತಿಗೀತೆ ಹಾಗೂ ಭಜನಾ ಸೇವೆಗಳು ನಡೆಯಲಿವೆ.
ಬೊಳ್ಳಾಡು ಶ್ರೀ ಭಗವತೀ ಭಜನಾ ಸಮಿತಿ, ತೀಯಾ ಲಿಟಲ್ ಟೈಗರ್ಸ್, ಶ್ರೀ ಶಾಸ್ತಾ ಕುಣಿತ ಭಜನಾ ತಂಡ (ಮುಳಿಯ), ದಿವ್ಯಶಕ್ತಿ ಯುವಕ ಮಂಡಲ (ಕುದ್ದುಪದವು), ಶ್ರೀ ವಿಷ್ಣುಮೂರ್ತಿ ಭಜನಾ ಸಮಿತಿ (ಕುಟ್ಟಿತ್ತಡ್ಕ), ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ಉಕ್ಕುಡ), ಶ್ರೀ ಸ್ಕಂದ ಕುಣಿತ ಭಜನಾ ತಂಡ (ಚೆಂಡುಕಳ-ಅಳಿಕೆ) ಹಾಗೂ ಸುಜ್ಞಾನ ಮಹಿಳಾ ಮಂಡಳಿ (ಎರುಂಬು) ಸೇರಿದಂತೆ ಹಲವು ತಂಡಗಳು ಭಜನೆಯಲ್ಲಿ ಭಾಗವಹಿಸಲಿವೆ.ಭಜನಾ ಮಹೋತ್ಸವದ ಅಂಗವಾಗಿ ವಿಶೇಷ ಭಜನಾ ಸೇವೆ, ಅನ್ನದಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ದೀಪಕ್ಕೆ ಅಗತ್ಯವಿರುವ ಎಣ್ಣೆ ಸಮರ್ಪಣೆ ಸೇರಿದಂತೆ ವಿವಿಧ ಸೇವೆಗಳಲ್ಲಿ ಭಕ್ತರು ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ. ಪ್ರತಿ ಮಂಗಳವಾರ ಸಂಜೆ ನಡೆಯುವ ಭಜನಾ ಕಾರ್ಯಕ್ರಮಕ್ಕೂ ಭಕ್ತರು ಧನಸಹಾಯ ನೀಡುವಂತೆ ವಿನಂತಿಸಲಾಗಿದೆ.
ಇದೇ ವೇಳೆ, 2025ರ ಫೆಬ್ರವರಿ 9ರಂದು ನಡೆದ ಅರ್ಧ ವಾರ್ಷಿಕ ಭಜನೆಗೆ ₹200 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಧನಸಹಾಯ ನೀಡಿದ ದಾನಿಗಳ ಪಟ್ಟಿಯನ್ನು ಸಮಿತಿ ಪ್ರಕಟಿಸಿ, ಎಲ್ಲ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ.ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು,ಮನ–ಧನಗಳಿಂದ ಸಹಕರಿಸಿ ಶ್ರೀ ಭಗವತೀ ಮಾತೆಯ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ. ಸಂಪರ್ಕಕ್ಕಾಗಿ ಮಾಧವ ಬಂಗೇರ (ಮೊ. 9449332669, 8105305864) ಅವರನ್ನು ಸಂಪರ್ಕಿಸಬಹುದಾಗಿದೆ.








