Tuesday, July 21, 2026
spot_imgspot_img
spot_imgspot_img

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯಲ್ಲ: ಮೈಸೂರಿಗೆ ತಂದು ವಾಣಿಜ್ಯೀಕರಣ ಮಾಡೋದು ಸರಿಯಲ್ಲ- ಸಂಸದ ಯದುವೀ‌ರ್ ಒಡೆಯ‌ರ್

- Advertisement -
- Advertisement -

ಮೈಸೂರು: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯಲ್ಲ. ಕಂಬಳ ಒಂದು ಆಚರಣೆ, ಅದಕ್ಕೆ ಅದರದೇ ಆದ ನಂಬಿಕೆಯಿದೆ, ಧಾರ್ಮಿಕ ಹಿನ್ನಲೆಯಿದೆ. ಅದನ್ನು ಮೈಸೂರಿಗೆ ತಂದು ವಾಣಿಜ್ಯೀಕರಣ ಮಾಡೋದು ಸರಿಯಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯ‌ರ್ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಅವರು ಕಂಬಳ ಆಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ನಾನು ಎಕ್ಸ್ ನಲ್ಲಿ ನನ್ನ ಅಭಿಪ್ರಾಯ ಹೇಳಿದ್ದೇನೆ. ದಸರಾ ಸಮಯದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ ಇರುತ್ತೆ. ಅಂತದನ್ನು ಮೊದಲು ನಿವಾರಣೆ ಮಾಡಬೇಕು ಎಂದರು.ಈಗ ಬರ ಪರಿಸ್ಥಿತಿ ಎದುರಾಗಿದೆ. ಸಿಎಂ ಅವರೇ ಆ ಬೆಳೆ ಬೆಳೆ ಬೇಡಿ, ಡ್ಯಾಮ್ ನೀರು ನಂಬೇಡಿ ಅಂತ ಹೇಳಿದ್ದಾರೆ.

ಇಂತಹ ಸಮಯದಲ್ಲಿ ಕಂಬಳಕ್ಕೆ 8 ಕೋಟಿ ಖರ್ಚು ಮಾಡೋದು ಎಷ್ಟು ಸರಿ? ಇದು ಅವರಿಗೆ ಬಿಟ್ಟಿರುವ ವಿಚಾರ. ಈ ಹಿಂದೆ ಬರ ಸಂದರ್ಭದಲ್ಲಿ ಸರಳ ಹಾಗೂ ಸಂಪ್ರದಾಯ ದಸರಾ ಆಚರಣೆ ಮಾಡುತ್ತಾ ಬಂದಿದ್ದಾರೆ. ಬರ ಎದುರಾದರೆ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಿ ಎಂದು ಹೇಳಿದರು.

- Advertisement -

Related news

error: Content is protected !!