Thursday, July 9, 2026
spot_imgspot_img
spot_imgspot_img

ಕೇರಳ ಪೊಲೀಸ್‌ ವೆಬ್ ಸೈಟ್ ಗೆ ಸೈಬ‌ರ್ ದಾಳಿ ಶಂಕೆ: ಆಂತರಿಕ ಫೈಲ್ ಸಿಸ್ಟಮ್ ನಿಷ್ಕ್ರಿಯ

- Advertisement -
- Advertisement -

ತಿರುವನಂತಪುರಂ: ಆಂತರಿಕ ಫೈಲ್ ಗಳನ್ನು ನಿರ್ವಹಿಸುವ ಕೇರಳ ಪೊಲೀಸ್ ವೆಬ್ ಸೈಟ್ ಸಂಬಂಧಿಸಿದ ಅಪ್ಲಿಕೇಶನ್ ಒಂದು ನಿಷ್ಕ್ರಿಯಗೊಂಡಿದ್ದು, ಇದು ಸೈಬರ್ ದಾಳಿ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬಳಿಕ ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಪಿಟಿಐ ವರದಿ ಮಾಡಿದೆ.ವರದಿಗಳ ಪ್ರಕಾರ, ಆಂತರಿಕ ಫೈಲ್ಗಳು ಮತ್ತು ದತ್ತಾಂಶಗಳನ್ನು ನಿರ್ವಹಿಸಲು ಬಳಸಲಾಗುವ ಈ ಅಪ್ಲಿಕೇಶನ್ ಕಳೆದ ನಾಲ್ಕು ದಿನಗಳಿಂದ ನಿಷ್ಕ್ರಿಯವಾಗಿದ್ದು, ಇದನ್ನು ಹ್ಯಾಕ್ ಮಾಡಿರಬಹುದು ಎಂದು ಹೇಳಲಾಗಿದೆ. ಆದರೆ, ಯಾವುದೇ ದತ್ತಾಂಶ ಸೋರಿಕೆ ಆಗಿಲ್ಲ ಮತ್ತು ಅಪ್ಲಿಕೇಶನ್ ಅನ್ನು ಮರುಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವ್ಯತ್ಯಯದಿಂದಾಗಿ ಕಳೆದ ಕೆಲವು ದಿನಗಳಿಂದ ಪೊಲೀಸ್‌ ಇಲಾಖೆಯ ಒಳಗಿನ ಆಂತರಿಕ ಫೈಲ್ ಗಳ ಚಲನೆಗೆ ತೊಂದರೆಯಾಗಿದೆ.

ಆದರೆ, ಕೇರಳ ಪೊಲೀಸ್‌ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಬಳಸುವ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಯಾವುದೇ ತೊಂದರೆಯಾಗಿಲ್ಲ ಹಾಗೂ ಅವು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.ರಾಜ್ಯ ಸರ್ಕಾರದ ಒಡೆತನದ ಕೆಲ್ಮಾನ್‌ ಸಂಸ್ಥೆಯು ಈ ಸಿಸ್ಟಮ್ ನಿರ್ವಹಿಸುತ್ತಿದ್ದು ಈ ಸಂಸ್ಥೆಯು ಖಾಸಗಿ ಕಂಪನಿಯೊಂದಕ್ಕೆ ಹೊರಗುತ್ತಿಗೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

- Advertisement -

Related news

error: Content is protected !!