- Advertisement -
- Advertisement -
ವಿಟ್ಲ: ವಿಟ್ಲದ ಸೆಲೂನ್ ಮಾಲಕನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ವಿಟ್ಲದ ಎಂಪೈರ್ ಮಾಲ್ ನಲ್ಲಿ ಸೆಲೂನ್ ನಡೆಸುತ್ತಿರುವ ಉತ್ತರಪ್ರದೇಶದ ಮೂಲದ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಈತ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದೀಗ ಬಂದ ವರದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಈತ ಮೇಗಿನಪೇಟೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದು, ಚಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು ವಾಸವಾಗಿದ್ದಾರೆ. ಸುತ್ತಮುತ್ತಲಿನಲ್ಲಿ ಹಲವು ಮನೆಗಳಿವೆ. ಇದರಿಂದ ಆತಂಕ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ರಾಜ್ಯದಿಂದ ನಾಲ್ವರು ಕೆಲಸಗಾರರು ಆಗಮಿಸಿದ್ದರು. ಅವರು ಅಡ್ಡದ ಬೀದಿಯಲ್ಲಿರುವ ಸಲೂನ್ ನಲ್ಲಿ ಸೋಂಕಿತ ವ್ಯಕ್ತಿ ಜತೆ ಸಂಪರ್ಕದಲ್ಲಿದ್ದರು. ಬಳಿಕ ಪಟ್ಟಣ ಪಂಚಾಯತ್ ಸೆಲೂನ್ ಗೆ ಬೀಗ ಹಾಕಿತ್ತು.
- Advertisement -