Friday, July 10, 2026
spot_imgspot_img
spot_imgspot_img

“‘ಸಹಾಯ ಮಾಡಿ’ ಎಂದು ಮನವಿ ಮಾಡಿದ ವಿದ್ಯಾರ್ಥಿನಿ- ಸ್ಪಂದಿಸದ ಶಿಕ್ಷಕರು – ಸಿಸಿಟಿವಿ ವೈರಲ್”

- Advertisement -
- Advertisement -

ಜೈಪುರ : ರಾಜಸ್ಥಾನದ ಜೈಪುರದ ಶಾಲೆಯೊಂದರಲ್ಲಿ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ 9 ವರ್ಷದ ಅಮೈರಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ವೈರಲ್‌ ಆಗಿದ್ದು, ಇದೀಗ ಪ್ರಕರಣ ಮಹತ್ವದ ತಿರುವನ್ನು ಪಡೆದುಕೊಂಡಿದೆ.ಅಮೈರಾ ಅವರ ಪೋಷಕರು ಈ ಕುರಿತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೊದಲ್ಲಿ, ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಅಮೈರಾಗೆ ಸಹಪಾಠಿಗಳು ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ.

ಇದಲ್ಲದೆ ಆಕೆ ಸಹಾಯಕ್ಕಾಗಿ ಶಿಕ್ಷಕರಿಗೆ ಮನವಿ ಮಾಡಿದರೂ ಶಿಕ್ಷಕರು ನಿರ್ಲಕ್ಷಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಡಿಯೋದಲ್ಲಿ ಅಮೈರಾ ತರಗತಿಗೆ ಪ್ರವೇಶಿಸುವುದು, ಸ್ನೇಹಿತನನ್ನು ಸ್ವಾಗತಿಸುತ್ತಿರುವುದು, ಇತರ ಮಕ್ಕಳೊಂದಿಗೆ ಡ್ಯಾನ್ಸ್ ನಲ್ಲಿ ಭಾಗವಹಿಸುತ್ತಿರುವುದು ಕಂಡು ಬಂದಿದೆ.ಸಿಸಿಟಿವಿ ದೃಶ್ಯಗಳಲ್ಲಿ, ಕೆಲವು ವಿದ್ಯಾರ್ಥಿಗಳು ಡಿಜಿಟಲ್ ಸ್ಲೇಟ್ ಅನ್ನು ತರಗತಿಗೆ ತರುತ್ತಿರುವುದು ಕಂಡು ಬಂದಿದೆ.

ವಿಡಿಯೋದಲ್ಲಿನ ಧ್ವನಿ ವಿವರಣೆಯ ಪ್ರಕಾರ, ಹಲವು ವಿದ್ಯಾರ್ಥಿಗಳು ಆ ಡಿಜಿಟಲ್ ಸ್ಲೇಟ್ ಅನ್ನು ಅಮೈರಾಗೆ ಪದೇ ಪದೇ ತೋರಿಸುತ್ತಿದ್ದರು. ಅದರ ಬಳಿಕ ಅಮೈರಾಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ, ಆಕೆ ಆತಂಕಗೊಂಡಿರುವುದು, ಅಸಹಜವಾಗಿ ವರ್ತಿಸುತ್ತಿರುವುದು ಮತ್ತು ಮುಜುಗರ ಅನುಭವಿಸುತ್ತಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ. ಆ ಬಳಿಕ ಅಮೈರಾ ಕ್ಲಾಸ್ ಟೀಚರ್ ಪುನೀತ ಶರ್ಮಾ ಅವರನ್ನು ಸಮೀಪಿಸಿ ಏನಾಯಿತು ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.ಅಮೈರಾ ನೆಲಮಹಡಿಯಿಂದ ನಾಲ್ಕನೇ ಮಹಡಿಯತ್ತ ತೆರಳುತ್ತಿದ್ದಾಗಲೂ ಯಾವುದೇ ಶಿಕ್ಷಕ ಅಥವಾ ಸಿಬ್ಬಂದಿ ಆಕೆಯನ್ನು ಹಿಂಬಾಲಿಸಿಲ್ಲ ಮತ್ತು ತಡೆಯಲಿಲ್ಲ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಪ್ರಕರಣದಲ್ಲಿ ಪೊಲೀಸ್ ನಿಷ್ಕ್ರಿಯತೆ ಕಂಡು ಬಂದಿದೆ.

ಶಾಲಾ ಮುಖ್ಯಸ್ಥರು, ಪ್ರಾಂಶುಪಾಲರು, ತರಗತಿ ಶಿಕ್ಷಕರ ವಿರುದ್ಧ ಜೆಜೆ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.ಸಿಸಿಟಿವಿ ದೃಶ್ಯಾವಳಿಯಲ್ಲಿ ನವೆಂಬರ್ 1ರಂದು ಶಾಲೆಯ ನಾಲ್ಕನೇ ಮಹಡಿಯಿಂದ ಬಾಲಕಿ ಜಿಗಿದಿರುವುದು ಕಂಡು ಬಂದಿದೆ. ಗಂಭೀರವಾಗಿದ್ದ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಈ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

- Advertisement -

Related news

error: Content is protected !!