Monday, July 13, 2026
spot_imgspot_img
spot_imgspot_img

ಅನಂತಾಡಿ ಯುವಕ ಮಂಡಲದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಅಧ್ಯಕ್ಷರಾಗಿ ಕಿರಣ್ ಹೆಗ್ಡೆ ಜೋಗಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ನಾಯ್ಕ್ ಮಠ ಆಯ್ಕೆ

ಅನಂತಾಡಿ: ಅನಂತಾಡಿ ಯುವಕ ಮಂಡಲ (ರಿ) ಮಹಾಸಭೆಯು ಜುಲೈ 12ರಂದು ಯುವಕ ಮಂಡಲದ ಸಭಾಂಗಣದಲ್ಲಿ ಅಧ್ಯಕ್ಷ ಕಿರಣ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸತೀಶ್ ಪೂಜಾರಿ ಬಾಬಣಕಟ್ಟೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೌರೀಶ್ ಶೆಟ್ಟಿ ಕರಿಂಕ ಅವರು 2025-26ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಪದಾಧಿಕಾರಿಗಳು: ಗೌರವಾಧ್ಯಕ್ಷರು: ಬಿ. ನರೇಂದ್ರ ರೈ ನೆಲ್ತೊಟ್ಟು, ಅಧ್ಯಕ್ಷರು: ಕಿರಣ್ ಹೆಗ್ಡೆ ಜೋಗಿಬೆಟ್ಟು, ಉಪಾಧ್ಯಕ್ಷರು: ಮೋಹನ್ ಚಂದ್ರ ಶೆಟ್ಟಿ ಕರಿಂಕ, ಸತೀಶ್ ಪೂಜಾರಿ ಬಾಬಣಕಟ್ಟೆ, ಪ್ರಧಾನ ಕಾರ್ಯದರ್ಶಿ: ನಾಗೇಶ್ ನಾಯ್ಕ್ ಮಠ, ಕೋಶಾಧಿಕಾರಿ: ಪ್ರವೀಣ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ: ಚಂದ್ರಹಾಸ ಗೌಡ ಮಠದಮೂಲೆ, ಜೊತೆ ಕ್ರೀಡಾ ಕಾರ್ಯದರ್ಶಿಗಳು: ಶ್ರೀನಿಧಿ ಪಡಿಪಿರೆ, ಪ್ರವೀಣ್ ದೇವಿನಗರ, ಭರತ್ ಚಿತ್ತಾರಿಗೆ, ಸಂಘಟನಾ ಕಾರ್ಯದರ್ಶಿ: ನಿತಿನ್ ರೈ ತುಂಬೇಕೋಡಿ, ಪ್ರಚಾರ ವಿಭಾಗ: ಪ್ರವೀಣ್ ನಾಯ್ಕ್ ಕರಿಂಕ, ದಿನೇಶ್ ವರ್ತೇಲು, ಯೋಗೀಶ್, ಸಾಂಸ್ಕೃತಿಕ ವಿಭಾಗ: ಚೇತನ್ ಪೂಜಾರಿ ಬಾಬಣಕಟ್ಟೆ, ಸುಂದರ ಬಾಕಿಲ

ಕಾರ್ಯಕಾರಿಣಿ ಸಮಿತಿಗೆ ಯಶ್ವಿನ್, ಅರವಿಂದ್, ಪುನೀತ್, ರಿತೇಶ್, ಗೌರೀಶ್ ಶೆಟ್ಟಿ ಕರಿಂಕ, ರವಿಚಂದ್ರ ಪೂಜಾರಿ, ಗಂಗಾಧರ ಗೌಡ, ವಿಶ್ವನಾಥ ದೇವಿನಗರ, ಗೌತಮ್ ದೇವಿನಗರ ಹಾಗೂ ಶರೀಫ್ ಅನಂತಾಡಿ ಅವರನ್ನು ಸದಸ್ಯರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯು ಗೌರೀಶ್ ಶೆಟ್ಟಿ ಕರಿಂಕ ಅವರ ಧನ್ಯವಾದದೊಂದಿಗೆ ಮುಕ್ತಾಯಗೊಂಡಿತು.

- Advertisement -

Related news

error: Content is protected !!