Wednesday, July 15, 2026
spot_imgspot_img
spot_imgspot_img

ಚಾಮರಾಜನಗರ: ರಸ್ತೆ ಕಾಮಗಾರಿ ವೇಳೆ ಟೆಂಡರ್‌ ಉಲ್ಲಂಘನೆ; ಕರ್ತವ್ಯ ಲೋಪ – ಇಬ್ಬರು ಅಧಿಕಾರಿಗಳ ಅಮಾನತು

- Advertisement -
- Advertisement -

ಚಾಮರಾಜನಗರ: ರಸ್ತೆ ಕಾಮಗಾರಿ ವೇಳೆ ಟೆಂಡರ್‌ ಉಲ್ಲಂಘನೆ ಹಾಗೂ ಕರ್ತವ್ಯ ಲೋಪ ಆರೋಪದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಹಿಂದಿನ ಎಇಇ ಪುರುಷೋತ್ತಮ , ಪ್ರಸ್ತುತ ಕೊಳ್ಳೇಗಾಲ ಉಪ ವಿಭಾಗದ ಎನ್.ಸುರೇಂದ್ರ ಕುಮಾರ್ ಅಮಾನತುಗೊಂಡವರು.

ಟೆಂಡರ್ ನಿಯಮ ಉಲ್ಲಂಘನೆ, ಗುಣಮಟ್ಟ ಪರೀಕ್ಷೆ ನಡೆಸದಿರುವುದು, ಅಳತೆಗಳಲ್ಲಿ ವ್ಯತ್ಯಾಸವಿದ್ದರೂ 88.83 ಲಕ್ಷ ಮೊತ್ತದ ಬಿಲ್ ಪಾವತಿ ಮಾಡಿದ್ದರು. ಆರ್ಥಿಕ ನಷ್ಟ ಉಂಟು ಮಾಡಿದ ಹಿನ್ನೆಲೆ, ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಹನೂರು ತಾಲೂಕಿನ ಕೊರಮನಕತ್ರಿ, ಟಿಬೇಟಿಯನ್ ಸೆಟಲ್‌ಮೆಂಟ್ ಮಾರ್ಗದ 4.20km ರಸ್ತೆ. ಪೂರ್ವಾನುಮೋದನೆಯಿಲ್ಲದೇ ಟೆಂಡರ್ ಆಹ್ವಾನಿಸಿ ಅಂಗೀಕಾರ ಮಾಡಲಾಗಿತ್ತು. ಗುಣಮಟ್ಟ ಪರೀಕ್ಷೆ ನಡೆಸಿರಲಿಲ್ಲ. ಅಳತೆ ಪುಸ್ತಕ ಹಾಗೂ ಕಾಮಗಾರಿಗಳಲ್ಲಿ ವ್ಯತ್ಯಾಸವಾಗಿತ್ತು. ಚಾಲ್ತಿ ಬಿಲ್ ಮೂಲಕ 88.83 ಲಕ್ಷ ರೂ. ಪಾವತಿ ಮಾಡಲಾಗಿತ್ತು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

- Advertisement -

Related news

error: Content is protected !!