Wednesday, July 15, 2026
spot_imgspot_img
spot_imgspot_img

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಐ ‘ಲೆವೆಲ್ 5’ ಮಾನ್ಯತೆ

- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎ.ಸಿ.ಐ. ಅಂದರೆ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ ಸಂಸ್ಥೆಯ ‘ಏರ್‌ಪೋರ್ಟ್ ಕಸ್ಟಮರ್‌ಎಕ್ಸ್‌ಪೀರಿಯನ್ಸ್ ಅಕ್ರೆಡಿಟೇಶನ್’ ಕಾರ್ಯಕ್ರಮದಡಿ ಅತ್ಯುನ್ನತ ‘ಲೆವೆಲ್ 5’ ಮಾನ್ಯತೆ ಲಭಿಸಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ನೆಟ್‌ವರ್ಕ್ ವ್ಯಾಪ್ತಿಯ ಮುಂಬಯಿ ಮತ್ತು ಅಹಮದಾಬಾದ್ ಬಳಿಕ ಈ ಗೌರವ ಪಡೆದ ಮೂರನೇ ವಿಮಾನ ನಿಲ್ದಾಣವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಕರ್ನಾಟಕದಲ್ಲಿ ಈ ಮೈಲುಗಲ್ಲು ತಲುಪಿದ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದಲ್ಲಿ ಇದುವರೆಗೆ ಕೇವಲ ನಾಲ್ಕು ವಿಮಾನ ನಿಲ್ದಾಣಗಳು ಮಾತ್ರ ಈ ಜಾಗತಿಕ ಮಾನ್ಯತೆ ಪಡೆದಿದ್ದು, ಮಂಗಳೂರು ವಿಮಾನ ನಿಲ್ದಾಣವು 2025ರ ಜುಲೈಯಲ್ಲಿ ‘ಲೆವೆಲ್ 4’, 2024ರ ಫೆಬ್ರವರಿಯಲ್ಲಿ ‘ಲೆವೆಲ್ 3’ ಮಾನ್ಯತೆ ಪಡೆದಿತ್ತು. ‘ಲೆವೆಲ್ 5’ ಮಾನ್ಯತೆಯು ವಿಮಾನ ನಿಲ್ದಾಣದ ಇಡೀ ವ್ಯವಸ್ಥೆಯುದ್ದಕ್ಕೂ ಗ್ರಾಹಕ ಸೇವೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವುದನ್ನು ಗುರುತಿಸುತ್ತದೆ.

ಎಸಿಐ ಲೆವೆಲ್ 5 ಮಾನ್ಯತೆಯು ಮಂಗಳೂರು ವಿಮಾನ ನಿಲ್ದಾಣದ ರೂಪಾಂತರ ಮತ್ತು ಉತ್ಕೃಷ್ಟತೆಯ ಪ್ರಯಾಣದಲ್ಲಿ ಒಂದು ಮಹತ್ವದ ಮೈಲುಗಲ್ಲು ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!