Sunday, September 13, 2026
spot_imgspot_img
spot_imgspot_img

ಕೆಪಿಎಸ್‌ಸಿಯಲ್ಲಿ ಡೀಲ್ – 80 ಲಕ್ಷಕ್ಕೆ ಪಶುವೈದ್ಯಾಧಿಕಾರಿ ಹುದ್ದೆ ಸೇಲ್!

- Advertisement -
- Advertisement -

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಗೇಟ್ ಪಾಸ್ ನೀಡಿ, ಕಾಸು ಕೊಟ್ಟವರಿಗೆ ನೌಕರಿ ಮಾರಾಟ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕರ್ಮಕಾಂಡವೊಂದು ಬಟಾ ಬಯಲಾಗಿದೆ.

ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿರುವ ಪಶುವೈದ್ಯಾಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೋಟಿ ಕೋಟಿ ರೂಪಾಯಿಗಳ ಅಕ್ರಮ ನಡೆದಿರುವುದು ಬಯಲಿಗೆ ಬಂದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏಜೆಂಟರ್‌ಗಳಿಂದಲೇ ಖುದ್ದು ಕರೆ ಹೋಗುತ್ತಿದ್ದು, ನಿಮ್ಮ ಅಂಕಗಳು ಕಮ್ಮಿ ಇವೆ, ಅಂತಿಮ ಪಟ್ಟಿಯಲ್ಲಿ ಹೆಸರು ಬರಬೇಕೆಂದರೆ ಕಾಸು ಕೊಡಿ ಎಂದು ಬೆದರಿಸಿ ಆಮಿಷ ಒಡ್ಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜನವರಿಯಲ್ಲಿ ನಡೆದ ಪರೀಕ್ಷೆಯ ಅಂತಿಮ ಆಯ್ಕೆ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು. ಈ ನೇಮಕಾತಿ ಅಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ನೂರಾರು ಪಶುವೈದ್ಯಾಧಿಕಾರಿ ಅಭ್ಯರ್ಥಿಗಳು ಇಂದು ವಿಧಾನಸೌಧ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ದೂರು ನೀಡಿದ್ದಾರೆ.

ಪಶುವೈದ್ಯಕೀಯ ಪದವಿಯಲ್ಲೇ ಫೇಲ್ ಆಗಿದ್ದ ಹಲವು ಅಭ್ಯರ್ಥಿಗಳು, ಕೆಪಿಎಸ್‌ಸಿ ಪ್ರಕಟಿಸಿದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಉನ್ನತ ಸ್ಥಾನ ಮತ್ತು ರ್‍ಯಾಂಕ್‌ ಪಡೆದುಕೊಂಡಿರುವುದು ಅಭ್ಯರ್ಥಿಗಳ ಕಣ್ಣು ಕೆಂಪಗಾಗಿಸಿದೆ. ಪಶುವೈದ್ಯಾಧಿಕಾರಿ ಹುದ್ದೆಗೆ 80 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು 40 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲೇಬೇಕು ಎಂದು ಏಜೆಂಟ್ ಒಬ್ಬ ಅಭ್ಯರ್ಥಿಯ ತಂದೆಯೊಂದಿಗೆ ನಡೆಸಿದ ಕರಾಳ ಡೀಲ್‌ನ ಆಡಿಯೋ ಸಿಕ್ಕಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!