


ವಿಟ್ಲ: ನಾಥ ಪಂಥದ ವಿಶಿಷ್ಟ ಪೂಜಾ ಕೇಂದ್ರ ಹಾಗೂ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಿಟ್ಲ ಸೀಮೆಯ ಅತ್ಯಂತ ಪ್ರಾಚೀನ ಕ್ಷೇತ್ರವಾದ ವಿಟ್ಲ ಶ್ರೀ ಯೋಗೀಶ್ವರ (ಜೋಗಿ) ಮಠ ಮತ್ತು ದೇವಸ್ಥಾನದ ಪುನರ್ ನಿರ್ಮಾಣದ ಮಹಾ ಕಾಮಗಾರಿ ಇದೀಗ ಪ್ರಗತಿಯಲ್ಲಿದೆ.
ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಈ ಮಠ ಹಾಗೂ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ವಿಟ್ಲ ಶ್ರೀ ಮಠದ ವ್ಯಾಪ್ತಿಯ ಜೋಗಿ ಸಮಾಜದವರು, ಮಠದ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡಿರುವ ಮಾಜಿ ಹಿಡುವಳಿದಾರರು ಹಾಗೂ ಊರಿನ ಪ್ರಮುಖ ಧಾರ್ಮಿಕ ಮುಂದಾಳುಗಳು ಒಟ್ಟಾಗಿ ಸೇರಿ ‘ವಿಟ್ಲ ಶ್ರೀ ಯೋಗೀಶ್ವರ (ಜೋಗಿ) ಮಠ ಪುನರ್ ನಿರ್ಮಾಣ ಸಮಿತಿ (ರಿ.) ವಿಟ್ಲ’ ವನ್ನು ರಚಿಸಿಕೊಂಡು ಈ ಪವಿತ್ರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ನಾಥ ಪಂಥದ ಪ್ರಥಮ ಗುರುವೆನಿಸಿದ ಮತ್ಯೇಂದ್ರನಾಥರ ಶಿಷ್ಯರಾದ ಶ್ರೀ ಗೋರಕ್ಷನಾಥರಿಂದ ಸ್ಥಾಪಿತವಾದ ಸೈದ್ಧಾಂತಿಕ ಹಿನ್ನೆಲೆಯುಳ್ಳ ಈ ಕ್ಷೇತ್ರಕ್ಕೆ ವಿಟ್ಲ ಯೋಗೀಶ್ವರ ಮಠದ ಮಠಾಧೀಶರಾದ ಶ್ರೀ ಶ್ರದ್ಧಾನಾಥಜೀ ಅವರ ಮಾರ್ಗದರ್ಶನವಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ವಿಟ್ಲ ಅರಮನೆಯ ಶ್ರೀ ಬಂಗಾರ ಅರಸು ಅವರ ಗೌರವಾಧ್ಯಕ್ಷತೆಯಲ್ಲಿ 155 ಜನರ ಸಮಿತಿಯು ಅಕ್ಟೋಬರ್ 15, 2023 ರಂದು ಆರಾಧ್ಯ ದೇವರಾದ ಶ್ರೀ ಕಾಶಿಕಾಲಭೈರವ, ಶ್ರೀ ಮಂಜುನಾಥ ಮತ್ತು ಶ್ರೀ ವ್ಯಾಘ್ರು ಚಾಮುಂಡಿ ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಕೈಹಾಕಿತ್ತು.
ಪುತ್ತೂರಿನ ಪ್ರಸಿದ್ಧ ವಾಸ್ತುಶಿಲ್ಪಿ ಶ್ರೀ ಜಗನ್ನಿವಾಸರಾವ್ ಅವರು ಈ ಕ್ಷೇತ್ರಕ್ಕಾಗಿ ಒಟ್ಟು ರೂ. 2.50 ಕೋಟಿ ವೆಚ್ಚದ ಯೋಜನೆಯ ನೀಲಿ ನಕಾಶೆಯನ್ನು ತಯಾರಿಸಿಕೊಟ್ಟಿದ್ದಾರೆ. ವಿಟ್ಲ ಸೀಮೆಯ ತಂತ್ರಿಗಳಾದ ಬ್ರಹ್ಮಶ್ರೀ ರಘುರಾಮ ತಂತ್ರಿಗಳ ಪೌರೋಹಿತ್ಯದಲ್ಲಿ ಈಗಾಗಲೇ ದೇವರ ಬಾಲಾಲಯ ಪ್ರತಿಷ್ಠೆ, ಶಿಲಾನ್ಯಾಸ, ಪಾದುಕಾನ್ಯಾಸ, ಶತರುದ್ರಾಭಿಷೇಕ ಹಾಗೂ ಮಹಾರುದ್ರಾಭಿಷೇಕದಂತಹ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ನೆರವೇರಿವೆ.
ಪ್ರಸ್ತುತ ಕ್ಷೇತ್ರದಲ್ಲಿ ಶಿಲಾಮಯವಾದ ಶ್ರೀ ಮಂಜುನಾಥ ದೇವರಗುಡಿ ಹಾಗೂ ಶಿಲಾಮಯ ಕಾಶಿ ಕಾಲಭೈರವ ದೇವರ ಗುಡಿ ಮತ್ತು ತೀರ್ಥಬಾವಿ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಎರಡು ಗುಡಿಗಳ ಶಿಖರದ ದಾರುಶಿಲ್ಪದ (ಮರದ ಕೆತ್ತನೆ) ಕೆಲಸಗಳು ಪ್ರಗತಿಯಲ್ಲಿವೆ. ಇಲ್ಲಿಯವರೆಗೆ ಸಮಾಜ ಬಾಂಧವರಿಂದ, ಮಠದ ವ್ಯಾಪ್ತಿಯ ಮಾಜಿ ಹಿಡುವಳಿದಾರರಿಂದ ಹಾಗೂ ಊರ-ಪರಊರ ದಾನಿಗಳಿಂದ ಒಟ್ಟು ರೂ. 1,26,17,690.00 (ಒಂದು ಕೋಟಿ ಇಪ್ಪತ್ತಾರು ಲಕ್ಷಕ್ಕೂ ಅಧಿಕ) ದೇಣಿಗೆ ಸಂಗ್ರಹವಾಗಿದ್ದು, ಬೇಸ್ ಮೆಂಟ್ (ಪಂಚಾಂಗ), ಕಪ್ಪು ಕಲ್ಲಿನ ರಚನೆ, ಕಿರಾಲುಬೋಗಿ ಮರ ಹಾಗೂ ಶಿಲಾಮಯ ಗುಡಿಯ ಶಿಲೆಗಳ ಜೋಡಣೆ, ಸಭಾಭವನದ ಮಾದರಿ ಶೆಡ್ ಹಾಗೂ ತೀರ್ಥಬಾವಿಯ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ.
ದೇಗುಲದ ಗುಡಿಗೆ ತಾಮ್ರದ ಹೊದಿಕೆಯ ಶಿಖರಕ್ಕಾಗಿ ಸಮಿತಿಯು ವಿಶೇಷ ಯೋಜನೆಯನ್ನು ರೂಪಿಸಿದೆ. ಒಂದು ಚದರ ಅಡಿಗೆ ತಾಮ್ರದ ಹೊದಿಕೆಗೆ ರೂ. 3,000/- ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ತಲಾ 5 ಕೂಪನ್‌ಗಳಿರುವ ಪುಸ್ತಕದ ಮೂಲಕ ದೇಣಿಗೆ ನೀಡಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬಹುದಾಗಿದೆ. ಇದಲ್ಲದೆ, ಸುತ್ತು ಗೋಪುರಕ್ಕೆ ಅಗತ್ಯವಿರುವ 16 ಶಿಲಾ ಸ್ತಂಭಗಳಿಗೆ (ತಲಾ ರೂ. 30,000/-), ಮುಖ್ಯ ದ್ವಾರ ಬಂದ್, ಮಂಜುನಾಥ ಹಾಗೂ ಕಾಶಿಕಾಲಭೈರವ ಗುಡಿಯ ತೇಗದ ಕೆತ್ತನೆಯ ಬಾಗಿಲುಗಳು (ತಲಾ ರೂ.4 ಲಕ್ಷ), ಗ್ರಾನೈಟ್ ಫ್ಲೋರಿಂಗ್ ಹಾಗೂ ತಾಮ್ರದ ಕಲಶಗಳು ಸೇರಿದಂತೆ ಇನ್ನು ಹಲವಾರು ಪ್ರಮುಖ ಕಾಮಗಾರಿಗಳಿಗೆ ಸುಮಾರು ರೂ. 1.25 ಕೋಟಿ ಹಣದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ನಾಥ ಪಂಥದ ಈ ಪವಿತ್ರ ಮಠದ ಪುನರ್ ನಿರ್ಮಾಣ ಕಾರ್ಯದಲ್ಲಿ ಮಹಾದಾನಿಗಳು, ಭಗವದ್ಭಕ್ತರು ತನು-ಮನ-ಧನದ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷರಾದ ಯಶವಂತ ವಿಟ್ಲ, ಕಾರ್ಯಾಧ್ಯಕ್ಷರಾದ ಡಾ। ಗೀತಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಳೂರು ಹಾಗೂ ಕೋಶಾಧಿಕಾರಿ ಸತೀಶ್ ಕುಮಾರ್ ಕೂಟತ್ತಜೆ ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ದೇಣಿಗೆ ನೀಡಲು ಬ್ಯಾಂಕ್ ಖಾತೆ ವಿವರಗಳು:ಭಕ್ತರು ತಮ್ಮ ದೇಣಿಗೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು ಅಥವಾ ಪ್ರಕಟಣೆಯಲ್ಲಿರುವ QR ಕೋಡ್ ಬಳಸಿ ಗೂಗಲ್ ಪೇ (Google Pay) ಮೂಲಕವೂ ಕಳುಹಿಸಬಹುದು.
ಬ್ಯಾಂಕ್ ಹೆಸರು: ವಿಟ್ಲ ಕೆನರಾ ಬ್ಯಾಂಕ್ (Canara Bank, Vittal)
(A/c No.): 110166014883
(IFSC Code): CNRB0010141
(MICR Code): 575015098
ಬ್ಯಾಂಕ್ ಹೆಸರು: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಖಾತೆ
(A/c No.): 2001-11984
ಸಂಪರ್ಕ ಸಂಖ್ಯೆಗಳು:
7259133438, 9448456723, 9449239453, 9845635250, 6360869922








