Monday, October 26, 2026
spot_imgspot_img
spot_imgspot_img

ವಿಟ್ಲ: ಜುಲೈ 26 ರಂದು ಬಿಲ್ಲವ ಸಂಘ (ರಿ.) ಮತ್ತು ಮಹಿಳಾ ಘಟಕ ಹಾಗೂ ಯುವವಾಹಿನಿ (ರಿ.) ವಿಟ್ಲ ಇವರ ಜಂಟಿ ಆಶ್ರಯದಲ್ಲಿ “ಆಟಿಒಂಜಿ ದಿನ” ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಬಿಲ್ಲವ ಸಂಘ (ರಿ.) ವಿಟ್ಲ, ಮಹಿಳಾ ಘಟಕ ಹಾಗೂ ಯುವವಾಹಿನಿ (ರಿ.) ವಿಟ್ಲ ಇವರ ಜಂಟಿ ಆಶ್ರಯದಲ್ಲಿ “ಆಟಿಒಂಜಿ ದಿನ” ಕಾರ್ಯಕ್ರಮವು ಜುಲೈ 26ರಂದು (ಆದಿತ್ಯವಾರ) ಬೆಳಿಗ್ಗೆ 11 ಗಂಟೆಗೆ ವಿಟ್ಲದ ಫೋನೋಟ್ಟುವಿನ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಮಹಿಳಾ ಘಟಕ, ವಿಟ್ಲ ಅಧ್ಯಕ್ಷೆ ಶ್ರೀಮತಿ ವನಿತಾ ಚಂದ್ರಹಾಸ ಸುವರ್ಣ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕಿನ ಉಪತಹಶೀಲ್ದಾರ್ ನವೀನ್ ಬೆಂಜನಪದವು ಹಾಗೂ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಪೂರ್ವಾಧ್ಯಕ್ಷೆ ಶುಭಾ ರಾಜೇಂದ್ರ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿಯಾಗಿ ಬಿಲ್ಲವ ಸಂಘ (ರಿ.) ವಿಟ್ಲದ ಅಧ್ಯಕ್ಷ ಜಯಪ್ರಕಾಶ ಪಾಣೆಮಜಲು, ಬ್ರಹ್ಮಶ್ರೀ ವಿ.ಸ. ಸಂಘ, ವಿಟ್ಲದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಡ, ಬಿಲ್ಲವ ಸಂಘ (ರಿ.) ವಿಟ್ಲದ ಗೌರವಾಧ್ಯಕ್ಷ ಸಂಜೀವ ಪೂಜಾರಿ ಗಜಾನನ, ಯುವವಾಹಿನಿ (ರಿ.) ವಿಟ್ಲದ ಅಧ್ಯಕ್ಷ ಕೆ.ಟಿ. ಆನಂದ ಹಾಗೂ ಮಹಿಳಾ ಘಟಕ, ವಿಟ್ಲದ ಗೌರವಾಧ್ಯಕ್ಷೆ ಶ್ರೀಮತಿ ಸರಿತಾ ರೂಪರಾಜ್ ಉಪಸ್ಥಿತರಿರುವರು.

- Advertisement -

Related news

error: Content is protected !!