Saturday, July 25, 2026
spot_imgspot_img
spot_imgspot_img

ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆಯ ಕೊಲೆ; ಪ್ರಿಯಕರ ಬಂಧನ

- Advertisement -
- Advertisement -

ಕೆನಡಾ: ಭಾರತೀಯ ಮೂಲದ ಮಹಿಳೆಯನ್ನು ಆಕೆಯ ಲಿವ್ ಇನ್ ಪ್ರಿಯಕರ ಹತ್ಯೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಕೆನಡಾದ ಎಡ್ಮಂಟನ್‌ನಲ್ಲಿ ನಡೆದಿದೆ.

ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸಮ್ರಾಲಾ ಮೂಲದ ದಮನ್‌ಪ್ರೀತ್ ಕೌರ್ (23) ಕೊಲೆಯಾದ ಮಹಿಳೆ. ಆಕೆಯ ಪ್ರಿಯಕರ ರಿತೀಶ್ ಕುಮಾರ್ (22) ಬಂಧಿತ ಆರೋಪಿ.

ಜುಲೈ 9 ರಂದು ರಿತೀಶ್ ಆಕೆಯ ಕತ್ತು ಹಿಸುಕಿ, ಮಾರಣಾಂತಿಕ ಹಲ್ಲೆ ಮಾಡಿದ್ದ. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಳು.

ತನಿಖೆ ನಡೆಸಿದ ಪೊಲೀಸರು ಜುಲೈ 14 ರಂದು ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಘೋಷಿಸಿದ್ದರು. ಜು.22 ರಂದು ಆರೋಪಿಯನ್ನು ಬಂಧಿಸಿದ ಪೊಲೀಸರು ಜುಲೈ 23 ರಂದು ಮಹಿಳೆಯನ್ನು ಕತ್ತು ಹಿಸುಕಿಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದರು. ತನಿಖೆ ಕಾರಣದಿಂದಾಗಿ ಈ ವಿಚಾರವನ್ನು ಪೊಲೀಸರು ಅಲ್ಲಿಯ ತನಕ ತಡೆಹಿಡಿದಿದ್ದರು.

ಆರ್ಥಿಕ ಸಂಕಷ್ಟದಿಂದಾಗಿ ಕೊಲೆಯಾದ ದಮನ್‌ಪ್ರೀತ್ ಕೌರ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹಾಯಕ್ಕಾಗಿ ಮನವಿ ಮಾಡಲಾಗಿದೆ. ಇದುವರೆಗೆ ದೇಣಿಗೆ ಮೂಲಕ ಸುಮಾರು 18 ಲಕ್ಷ ರೂ.ಗಳನ್ನು ಸಂಗ್ರಹ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!