- Advertisement -
- Advertisement -



ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಕ್ಲಬ್ ಅಧ್ಯಕ್ಷೆ ಶ್ವೇತಾ ರವಿಕುಮಾರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ಕ್ಲಬ್ ನ ಸ್ಥಾಪಕ ಸದಸ್ಯ ಹರೀಶ್ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಪಿ.ಆರ್.ಓ ಸುದರ್ಶನ್ ಪಡಿಯಾರ್ ವಿಟ್ಲ, ಸ್ಥಾಪಕ ಅಧ್ಯಕ್ಷ ಸಂದೇಶ ಶೆಟ್ಟಿ, ಕಾರ್ಯದರ್ಶಿ ದಿನಕರ ಆಳ್ವ, ವಲಯ ನಿರ್ದೇಶಕ ವಸಂತ್ ಶೆಟ್ಟಿ ಎರ್ಮಿನಿಲಿ, ಕೃಷ್ಣಪ್ಪ ಮೂಲ್ಯ, ಉಪಾಧ್ಯಕ್ಷ ಚಂದ್ರಹಾಸ ಗೌಡ ಬನ, ಧರಣಪ್ಪ ಗೌಡ ಬನ, ಸಾಯಿ ಗೀತಾ ಪಡಿಯಾರ್, ರವಿಕುಮಾರ್ ಮುಂತಾದ ಸದಸ್ಯರು ಉಪಸ್ಥಿತರಿದ್ದರು.
- Advertisement -








