ಸಾರ್ವಜನಿಕ ಕೆಸರ್ ಡೊಂಜಿ ದಿನ 2026 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ



ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ವಿಟ್ಲ ಘಟಕದ ಆಶ್ರಯದಲ್ಲಿ, ಬಿಲ್ಲವ ಸಂಘ (ರಿ) ವಿಟ್ಲ, ಬಿಲ್ಲವ ಮಹಿಳಾ ಘಟಕ ಕುಂಡಡ್ಕ ಬೆಳ್ಳಿಹಬ್ಬ ಸಮಿತಿ ಹಾಗೂ ಆರ್.ಕೆ. ಸಮೂಹ ಸಂಸ್ಥೆಗಳು ಸಹಯೋಗದಲ್ಲಿ ಆಗಸ್ಟ್. 9ರಂದು ವಿಟ್ಲದ ಅರಮನೆ ಗದ್ದೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ನಡೆಯಲಿರುವ ಸಾರ್ವಜನಿಕ ಕೆಸರ್ ಡೊಂಜಿ ದಿನ–2026 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ವಿಟ್ಲ ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಕೃಷ್ಣಯ್ಯ ವಿಟ್ಲ ಅರಮನೆ, ಯುವವಾಹಿನಿ ವಿಟ್ಲ ಇದರ ಅಧ್ಯಕ್ಷರಾದ ಕೆ.ಟಿ. ಆನಂದ, ಬಿಲ್ಲವ ಸಂಘ (ರಿ) ವಿಟ್ಲ ಇದರ ಅಧ್ಯಕ್ಷರಾದ ಜಯಪ್ರಕಾಶ್ ಪಾಣೆಮಜಲು, ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಎಂ.ಎಸ್. ಸಂಜೀವ ಗಜಾನನ, ಯುವವಾಹಿನಿ ಉಪಾಧ್ಯಕ್ಷರಾದ ಕೇಶವ, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಯುವವಾಹಿನಿ ಕಾರ್ಯದರ್ಶಿ ಧನಲಕ್ಷ್ಮೀ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವನಿತ ಚಂದ್ರಹಾಸ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.








