Friday, March 29, 2024
spot_imgspot_img
spot_imgspot_img

ಕೇಂದ್ರ ಸರ್ಕಾರದ ಚಕ್ರಬಡ್ಡಿ ರದ್ದು ಪ್ರಸ್ತಾಪ ಅತೃಪ್ತಿ ಸೂಚಿಸಿದ ಸುಪ್ರೀಂ

- Advertisement -G L Acharya panikkar
- Advertisement -

ಲಾಕ್ ಡೌನ್ ಅವಧಿಯಲ್ಲಿ ನ ಸಾಲದ ಮೇಲೆ ಚಕ್ರಬಡ್ಡಿ ವಸೂಲಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದ ಕುರಿತು ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಈ ಪ್ರಮಾಣ ಪತ್ರ ಸಮರ್ಪಕವಾಗಿಲ್ಲ. ಎಲ್ಲ ಮಾಹಿತಿ ಇದರಲ್ಲಿ ಇಲ್ಲ. ಚಕ್ರಬಡ್ಡಿ ರದ್ದುಪಡಿಸುವುದಾದರೆ ಅದನ್ನು ಯಾವ ರೀತಿ ಮಾಡಲಾಗುತ್ತದೆ ಎಂಬ ಅಂಶ ಸೇರಿದಂತೆ ಹಲವು ಮಹತ್ವದ ಅಂಶಗಳು ಈ ಪ್ರಮಾಣಪತ್ರದಲ್ಲಿ ಸೇರಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಒಂದು ವಾರದೊಳಗೆ ಸೂಕ್ತ ದಾಖಲೆ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಇಂದು ಮೊರೋಟೋರಿಯಂ ಅವಧಿಯ ಸಾಲದ ಮೇಲಿನ ಬಡ್ಡಿ ವಸೂಲಿ ಕುರಿತಂತೆ ಅಂತಿಮ ತೀರ್ಪು ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು.

- Advertisement -

Related news

error: Content is protected !!