Saturday, August 1, 2026
spot_imgspot_img
spot_imgspot_img

ಗೌಡರ ಯಾನೆ ಒಕ್ಕಲಿಗರ ಸಂಘ, ವಿಟ್ಲ ಮುಡ್ನೂರು ಇವರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮಹಿಳಾ ಘಟಕ ಮತ್ತು ಯುವ ವೇದಿಕೆ ವಿಟ್ಲ ಇವರ ಸಹಕಾರದೊಂದಿಗೆ “ಕೆಸರ್‍ ಡ್ ಒಂಜಿದಿನ”

- Advertisement -
- Advertisement -

ವಿಟ್ಲ: ಗೌಡರ ಯಾನೆ ಒಕ್ಕಲಿಗರ ಸಂಘ, ವಿಟ್ಲ ಮುಡ್ನೂರು ಆಶ್ರಯದಲ್ಲಿ ಹಾಗೂ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ಮಹಿಳಾ ಘಟಕ ಮತ್ತು ಯುವ ವೇದಿಕೆ ವಿಟ್ಲ ಇವರ ಸಹಕಾರದೊಂದಿಗೆ “ಕೆಸರ್‍ ಡ್ ಒಂಜಿದಿನ ” ಕಾರ್ಯಕ್ರಮವು ಆಗಸ್ಟ್ 2 ಭಾನುವಾರದಂದು ಪುರುಷೋತ್ತಮ ಗೌಡ ದರ್ಬೆಯವರ ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 9.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕರಾದ ಪದ್ಮಯ್ಯ ಗೌಡ,
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರು ಕರುಣಾಕರ ನಾಯ್ತೊಟ್ಟು, SRK ಮಾಲಕ ಕೇಶವ ಗೌಡ ಅಮೈ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ) ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಅಮಿತಾಗೋಪಾಲಕೃಷ್ಣ ಕುಡಿಪ್ಪಾಡಿಗುತ್ತು, ವಿಟ್ಲ ಪಿರ್ಕಾ ಮಹಿಳಾ ವಿವಿದೊದ್ದೇಶ ಸಹಕಾರಿ ಸಂಘ (ರಿ) ಅಧ್ಯಕ್ಷೆ ಶ್ರೀಮತಿ ಧರ್ಮವತಿ ಗೌಡ ದೇವರಮನೆ, ಪುತ್ತೂರು ಒಕ್ಕಲಿಗರು ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಚಿದಾನಂದ ಗೌಡ ಬೈಲಾಡಿ, ಪ್ರಗತಿಪರ ಕೃಷಿಕರು ಬಾಲಕೃಷ್ಣ ಗೌಡ ಹಡೀಲು, ಪ್ರಗತಿಪರ ಕೃಷಿಕರು ಬಟ್ಯಪ್ಪ ಗೌಡ ಪಟ್ನಾಜೆಮೂಲೆ, ಪ್ರಗತಿಪರ ಕೃಷಿಕರು ಬಾಲಕೃಷ್ಣ ಗೌಡ ಅಮೈ, ಉದ್ಯಮಿಗಳು ಯಶವಂತ ಗೌಡ ಬೊಳಿಗದ್ದೆ, ಪ್ರಗತಿಪರ ಕೃಷಿಕರು ತೀರ್ಥರಾಮಗೌಡ ಸೇನೆರಮಜಲು, ಪ್ರಗತಿಪರ ಕೃಷಿಕರು ಚಿನ್ನಪ್ಪ ಗೌಡ ಓಟೆ ಭಾಗವಹಿಸಲಿದ್ದಾರೆ.

ಸಂಜೆ 4.00 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಗೌಡ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ. ಕುಶಾಲಪ್ಪ ಗೌಡ, ಪುತ್ತೂರಿನ ಮಾಜಿ ಶಾಸಕರು ಸಂಜೀವ ಗೌಡ ಮಠಂದೂರು, ದಾರ್ಮಿಕ ಮುಖಂಡರು ಕಿರಣ್ ಚಂದ್ರ ಪುಷ್ಪಗಿರಿ, ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಪುತ್ತೂರು ಒಕ್ಕಲಿಗರ ಸೇವಾ ಸಂಘ(ರಿ)ದ ಅಧ್ಯಕ್ಷ ಸುಂದರ ಗೌಡ ಪುತ್ತೂರು, ನಿವೃತ್ತ ಸೈನಿಕರು ಸೇಸಪ್ಪ ಗೌಡ ಹಡೀಲು, ಪುತ್ತೂರು ಮಂಡಲ ಬಿಜೆಪಿ ಯುವಮೊರ್ಚ ಪ್ರಧಾನ ಕಾರ್ಯದರ್ಶಿ ನಿತಿನ್ ಗೌಡ ಬೊಡ್ಡೋಣಿ, ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಶ್ರೀಮತಿ ಚಂದ್ರಪ್ರಭ ಗೌಡ , Empaneled Structural Engineer ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರು ಪ್ರಸನ್ನ ದರ್ಬೆ, ಬಿಜೆಪಿ ಮುಖಂಡರು ಪುರುಷೋತ್ತಮ ಮುಂಗ್ಲಿಮನೆ , ಯುವ ವೇದಿಕೆ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ) ಅಧ್ಯಕ್ಷರು ದಿನೇಶ್ ಗೌಡ ಮಾಡ್ತೆಲು, ಶಿವಪ್ರಸಾದ್ ಗೌಡ ಮಾಡತ್ತಾರು, ಯತೀಶ್ ಗೌಡ ಹಡಿಲು ಭಾಗವಹಿಸಲಿದ್ದಾರೆ.

ಇದೇ ವೇಳೆ ಸಮಾಜದ ಸಾಧಕರಾದ ಪೂವಪ್ಪ ಗೌಡ ಪಿಲಿಂಜ , ಲಿಂಗಪ್ಪ ಗೌಡ ಅಗಸರಪಾಲು, ಶಿವಪ್ಪ ಗೌಡ ಅಮೈ ಮಾಗಣೆ, ತೇಜಪ್ಪ ಗೌಡ ಮಾಡತ್ತಾರು, ಪುರುಷೋತ್ತಮ ಗೌಡ ದರ್ಬೆ, ಕೇಶವ ಗೌಡ ಅಮೈ ಮಾಲಕರು SRK ಅವರನ್ನು ಸನ್ಮಾನಿಸಲಿದ್ದಾರೆ.

ಸ್ಪರ್ಧೆಗಳ ವಿವರ:

  1. 1 ರಿಂದ 5 ನೇ ತರಗತಿ ಮಕ್ಕಳಿಗೆ
  • 100 ಮೀ ಓಟ
  • ಉಪ್ಪು-ಮೊಟ್ಟೆ ಓಟ
  • ಬಾಲ್ದಿಗೆ ಚೆಂಡು

6 ರಿಂದ 10 ನೇ ತರಗತಿ ಮಕ್ಕಳಿಗೆ

    • 200 ಮೀ ಓಟ
    • ಹಿಮ್ಮುಖ ನಡಿಗೆ
    • ಹಾಳೆ ಓಟ
      -ಮೂರು ಕಾಲಿನ ಓಟ
    1. ಯುವತಿಯರು ಮತ್ತು ಮಾತೆಯರಿಗೆ
    • ಮಡಕೆ ಹೊಡೆಯುವುದು
    • ಗೂಟ ಸುತ್ತಿ ಓಟ
    • ಪ್ಲಾಸ್ಟಿಕ್ ಬಾಟಲಿಗೆ ನೀರು ತುಂಬಿಸುವುದು
    • ಹಗ್ಗಜಗ್ಗಾಟ
    • ಕಾಯಿ ಎಸೆತ (ತೆಂಗಿನಕಾಯಿ)
    • 100 ಮೀ ಓಟ
    1. ಯುವಕರು ಮತ್ತು ಪುರುಷರಿಗೆ
    • ಮಡಕೆ ಹೊಡೆಯುವುದು
    • ತೆಂಗಿನಕಾಯಿ ಎಸೆತ
    • ಗೂಟ ಸುತ್ತಿ ಓಟ
    • 200 ಮೀ ಓಟ
    • ಕಬ್ಬಡ್ಡಿ ಪಂದ್ಯಾಟ
    • ಹಗ್ಗಜಗ್ಗಾಟ
    1. 60 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು
    • ತೆಂಗಿನ ಕಾಯಿ ಎಸೆತ
    • ವೇಗದ ನಡಿಗೆ
      -ಶೋಬಾನೆ (ಪಾಡ್ದಾನ)

    ವಿಶೇಷ ಸೂಚನೆ:

    • ತಂಡಗಳನ್ನು ಕಾರ್ಯಕ್ರಮದ ಸ್ಥಳದಲ್ಲಿಯೇ ಆಯ್ಕೆ ಮಾಡಲಾಗುವುದು.
    • ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
    • ಚರ್ಚೆಗೆ ಅವಕಾಶವಿರುವುದಿಲ್ಲ.
    • ಹಾಳೆ ಓಟ ಮತ್ತು ಮೂರು ಕಾಲಿನ ಸ್ಪರ್ಧೆಗೆ ಬೇಕಾದ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತರಬೇಕು.
    - Advertisement -

    Related news

    error: Content is protected !!