Friday, April 19, 2024
spot_imgspot_img
spot_imgspot_img

ಕುಡ್ತಮುಗೇರು: ವ್ಯಾಕ್ಸಿನ್ ಶಿಬಿರದಲ್ಲಿ ಪಂಚಾಯತ್ ಸಿಬ್ಬಂದಿಯ ಕೈವಾಡದ ಆರೋಪ; ಸ್ಪಷ್ಟನೆ ನೀಡಿದ ಪಂಚಾಯತ್ ಸದಸ್ಯರು

- Advertisement -G L Acharya panikkar
- Advertisement -

ಕೊರೊನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅರೋಗ್ಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದರೆ ಕೊಳ್ನಾಡು ಗ್ರಾಮ ಪಂಚಾಯತಿನ ಉಪಾಧ್ಯಕ್ಷ ಮತ್ತು ಅವರ ಬೆಂಬಲಿಗರ ಕೀಳು ಮಟ್ಟದ ರಾಜಕೀಯದಿಂದಾಗಿ ಮಂಕುಡೆ ವ್ಯಾಕ್ಸಿನೇಷನ್ ಶಿಬಿರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಟೈಲರ್ ಅವರು ಈ ಎಲ್ಲಾ ಗೊಂದಲಗಳಿಗೆ ಪಂಚಾಯತ್ ಉಪಾಧ್ಯಕ್ಷನೇ ನೇರ ಹೊಣೆಯಾಗಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆ ನಡೆದ 3ವ್ಯಾಕ್ಸಿನಷನ್ ಶಿಬಿರವು ಅರೋಗ್ಯ ಸಿಬ್ಬಂದಿಗಳು ಮತ್ತು ಜನರ ಅಭೂತಪೂರ್ವ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಗ್ರಾಮದಲ್ಲಿ ನಡೆಯುವ ಎಲ್ಲಾ ವ್ಯಾಕ್ಸಿನೆಷನ್ ಶಿಬಿರದ ಯಶಸ್ಸು ತನಗೆ ಸಿಗಬೇಕೆಂದು ಕ್ಷುಲ್ಲಕ ರಾಜಕಾರಣದಿಂದ ಅರೋಗ್ಯಧಿಕಾರಿ ಮತ್ತು ಆಶಾಕಾರ್ಯಕರ್ತೆಯರ ಮೇಲೆ ರಾಜಕೀಯ ಪ್ರೇರಿತ ಆರೋಪವನ್ನು ಮಾಡುತ್ತಿದ್ದಾರೆಂದು ಇದೇ ಸಂಧರ್ಭದಲ್ಲಿ ಹೇಳಿದರು.

ಬೇಗ ಬಂದವರಿಗೆ ಆದ್ಯತೆಯ ಮೇಲೆ ಸ್ವಯo ಪ್ರೇರಿತವಾಗಿ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದ ಸಂಧರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಮತ್ತು ಬೆಂಬಲಿಗರು ಏಕಾಯೆಕಿ ನುಗ್ಗಿ ವ್ಯಾಕ್ಸಿನ್ ಪ್ರಕ್ರಿಯೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ ಇದಕ್ಕೆ ಸ್ಥಳೀಯ ಪಂಚಾಯತ್ ಸದಸ್ಯರು ಮತ್ತು ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸರದಿಯಲ್ಲಿ ಬಂದ ಎಲ್ಲರಿಗೂ ಆದ್ಯತೆಯ ಮೇಲೆ ವ್ಯಾಕ್ಸಿನ್ ನೀಡಲಾಗುತ್ತಿದೆಯೆಂದು ದಿಟ್ಟ ಉತ್ತರ ನೀಡಿದ್ದಾರೆ.

ಅಲ್ಲದೆ ಕೊಳ್ನಾಡು ಪಂಚಾಯತಿನಲ್ಲಿ ನಡೆದ ವ್ಯಾಕ್ಸಿನಷನ್ ಶಿಬಿರದಲ್ಲಿ ಪಂಚಾಯತ್ ಸಿಬ್ಬಂದಿಗಳ ಹೆಸರಿನಲ್ಲಿ 30ವ್ಯಾಕ್ಸಿನ್ ಟೋಕನ್ ಗಳನ್ನು ಅಕ್ರಮವಾಗಿ ಮೀಸಲಿರಿಸಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಮಂಕುಡೆ ವ್ಯಾಕ್ಸಿನೆಷನ್ ಶಿಬಿರದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಲಾಗಿದೆಯೆಂದು ತಿಳಿದು ಬಂದಿದೆ.ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ಗ್ರಾಮದ ಜನತೆಗೆ ಜಾಗೃತಿ ಮೂಡಿಸಬೇಕಾದ ಉಪಾಧ್ಯಕ್ಷರೇ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.

ಕೈಲಾಗದೆ ಇರುವವವರು ಮೈ ಪರಚಿಕೊಳ್ಳುತ್ತಿರುವ ಉಪಾಧ್ಯಕ್ಷರು ತಮ್ಮ ಜೀವದ ಹಂಗನ್ನೇ ತೊರೆದು ಸೇವೆ ನೀಡುತ್ತಿರುವ ಅರೋಗ್ಯ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ.ಈ ಎಲ್ಲಾ ರಾಜಕೀಯದ ನಡುವೆ ಮಂಕುಡೆಯಲ್ಲಿ ವ್ಯಾಕ್ಸಿನ್ ಲಭಿಸದೆ ನಿರಾಶರಾಗಿದ್ದ 10ಮಂದಿಯನ್ನು ಪಂಚಾಯತ್ ಸದಸ್ಯರಾದ ರಾಜಾರಾಮ್ ಹೆಗ್ಡೆ ಮತ್ತು ಹರೀಶ್ ಟೈಲರ್ ಅವರು ಕನ್ಯಾನ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವ್ಯಾಕ್ಸಿನ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

driving
- Advertisement -

Related news

error: Content is protected !!