Sunday, August 2, 2026
spot_imgspot_img
spot_imgspot_img

ಮಡಿಕೇರಿಯಲ್ಲಿ ಭಾರೀ ಮಳೆ – ಕರೀಕೆ ಗ್ರಾಮದಲ್ಲಿ ಭಾರೀ ಭೂಕುಸಿತ

- Advertisement -
- Advertisement -

ಮಡಿಕೇರಿ: ತಾಲೂಕಿನ ಕರೀಕೆ ಗ್ರಾಮದ ಚೆತ್ತುಕಾಯ – ಪಚ್ಚೆಪಿಲಾವು ರಸ್ತೆಯಲ್ಲಿ ಭಾರಿ ಭೂಕುಸಿತವಾಗಿದೆ. ಗ್ರಾಮದಲ್ಲಿ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ.

ಕರೀಕೆ ಗ್ರಾಮದ ಚೆತ್ತುಕಾಯ-ಪಚ್ಚೆಪಿಲಾವು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಗ್ರಾಮದ ಸುತ್ತಮುತ್ತಲಿನ ಹಲವು ಕಡೆಗಳಲ್ಲೂ ಗುಡ್ಡ ಕುಸಿಯುವ ಸಂಭವವಿದೆ. ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಭೂಕುಸಿತ ಉಂಟಾಗಿರುವ ಸ್ಥಳದಲ್ಲಿ ಮಣ್ಣು ತೆರವು ಹಾಗೂ ರಸ್ತೆ ದುರಸ್ತಿ ನಡೆಸುವಂತೆ ಮನವಿ ಮಾಡಲಾಗಿದೆ. ಸ್ಥಳದಲ್ಲಿ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!