Thursday, August 6, 2026
spot_imgspot_img
spot_imgspot_img

ಯುವವಾಹಿನಿ(ರಿ.) ವಿಟ್ಲ ಘಟಕದ ಆಶ್ರಯದಲ್ಲಿ ಬಿಲ್ಲವ ಸಂಘ (ರಿ.) ವಿಟ್ಲ, ಬಿಲ್ಲವ ಸಂಘ (ರಿ.) ಕುಂಡಡ್ಕ ಬೆಳ್ಳಿಹಬ್ಬ ಸಮಿತಿ ಹಾಗೂ ಆರ್. ಕೆ. ಸಮೂಹ ಸಂಸ್ಥೆಗಳು ಇದರ ಸಹಕಾರದೊಂದಿಗೆ “ಕೆಸರ್‌ಡೊಂಜಿ ದಿನ-2026” ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಯುವವಾಹಿನಿ(ರಿ.) ವಿಟ್ಲ ಘಟಕದ ಆಶ್ರಯದಲ್ಲಿ ಬಿಲ್ಲವ ಸಂಘ (ರಿ.) ವಿಟ್ಲ, ಮಹಿಳಾ ಘಟಕ ವಿಟ್ಲ, ಬಿಲ್ಲವ ಸಂಘ (ರಿ.) ಕುಂಡಡ್ಕ ಬೆಳ್ಳಿಹಬ್ಬ ಸಮಿತಿ, ಆರ್. ಕೆ. ಸಮೂಹ ಸಂಸ್ಥೆಗಳು ಇದರ ಸಹಕಾರದೊಂದಿಗೆ “ಕೆಸರ್‌ಡೊಂಜಿ ದಿನ-2026” ಕಾರ್ಯಕ್ರಮವು ಆಗಸ್ಟ್ 9, ಆದಿತ್ಯವಾರ ವಿಟ್ಲ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಅರಮನೆ ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಕಾರ್ಯಕ್ರಮವನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ನ ಪರಮಪೂಜ್ಯ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘ(ರಿ.) ವಿಟ್ಲದ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ. ಕೃಷ್ಣಯ್ಯ – ವಿಟ್ಲ ಅರಮನೆ, ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು, ರವಿಶಂಕರ್ ಶಾಸ್ತ್ರಿ ಮಣಿಲ- ಜಲಗಂಗಾ ಇರಿಗೇಶನ್ ಮಣಿಲ, ಹಿಂದು ಧಾರ್ಮಿಕ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ರಾಮ್ ದಾಸ್ ಶೆಟ್ಟಿ ವಿ.ಟಿ.ವಿ – ಸದಸ್ಯರು, ಮೀಡಿಯಾ ಅಕೃಡಿಯೇಷನ್ ಕರ್ನಾಟಕ ರಾಜ್ಯ ಕುಸ್ತಿ ಸಂಘ, ರೊ| ದಾಸಪ್ಪ ಪೂಜಾರಿ ನೆಕ್ಕಿಲಾರು – ಅಧ್ಯಕ್ಷರು, ರೋಟರಿ ಕ್ಲಬ್ ವಿಟ್ಲ, ಡಾ| ಗಾಯತ್ರಿ ಗೀತಪ್ರಕಾಶ್ – ಅಧ್ಯಕ್ಷರು, ಲಯನ್ಸ್ ಕ್ಲಬ್, ವಿಟ್ಲ, ಜೇಸಿ ಸಂದೀಪ್ ಪೂಜಾರಿ – ಅಧ್ಯಕ್ಷರು, ಜೆಸಿಐ ವಿಟ್ಲ, ಪ್ರಭಾಕರ ಶೆಟ್ಟಿ, ದಂಬೆಕಾನ -ಪ್ರಭಾ ವೈನ್ಸ್ ವಿಟ್ಲ, ದಯಾನಂದ ಶೆಟ್ಟಿ – ಉಜಿರೆಮಾರು, ಅಧ್ಯಕ್ಷರು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ, ನವೀನ್ ಪಟ್ಲ – ಸಂಚಾಲಕರು, ಬಿಲ್ಲವ ಸಂಘ, ಕುಂಡಡ್ಕ ಬೆಳ್ಳಿಹಬ್ಬ ಸಮಿತಿ, ಬಾಬು ಪೂಜಾರಿ, ಕೊಪ್ಪಳ, ಅಧ್ಯಕ್ಷರು, ವರ್ತಕರ ಸಂಘ ವಿಟ್ಲ, ಯುವವಾಹಿನಿ (ರಿ.) ಮಂಗಳೂರಿನ ಸಂಘಟನಾ ಕಾರ್ಯದರ್ಶಿ ಜಯರಾಮ ಬಿ. ಎನ್ ಭಾಗವಹಿಸಲಿದ್ದಾರೆ.

ಸಂಜೆ 4.00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷರಾದ ಕೆ. ಟಿ. ಆನಂದ ಪೂಜಾರಿ ವಹಿಸಲಿದ್ದಾರೆ. ಗೌರವ ಅತಿಥಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಭಾಗವಹಿಸಲಿದ್ದಾರೆ.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಅಶೋಕ್ ಬಿ. – ಶ್ರೀ ಚಾಮುಂಡೇಶ್ವರಿ ಮೋಟಾರ್ ವರ್ಕ್ಸ್, ಪುತ್ತೂರು ಇವರು ವಿತರಿಸಲಿದ್ದಾರೆ.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ರಾಜರಾಮ್ ಕೆ. ಬಿ., ಪದ್ಮನಾಭ ಪೂಜಾರಿ ಸಣ್ಣಗುತ್ತು, ವಕೀಲರು ಮತ್ತು ನೋಟರಿ, ಸಂಜೀವ ಪೂಜಾರಿ, ನಿಡ್ಯ ಅಧ್ಯಕ್ಷರು, ಬ್ರಹ್ಮಶ್ರೀ ಸಹಕಾರಿ ಬ್ಯಾಂಕ್, ವಿಟ್ಲ, ಸಮುದಾಯ ಆರೋಗ್ಯ ಕೇಂದ್ರ, ವಿಟ್ಲದ ವೈದ್ಯಾಧಿಕಾರಿ ಡಾ| ಸಮನ್ ಜೆ. ಶೆಟ್ಟಿ, ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ನ ಡಾ| ಗೀತಪ್ರಕಾಶ್, ಲ| ಸಂಜೀವ ಪೂಜಾರಿ, ಅಧ್ಯಕ್ಷರು, ಯಕ್ಷಭಾರತ ಸೇವಾ ಪ್ರತಿಷ್ಠಾನ (ರಿ.) ವಿಟ್ಲ, ಶ್ರೀಮತಿ ವನಿತಾ ಚಂದ್ರಹಾಸ, ಅಧ್ಯಕ್ಷರು, ಬಿಲ್ಲವ ಮಹಿಳಾ ಘಟಕ ಪುತ್ತೂರು, ಪರಮೇಶ್ವರ ಪೂಜಾರಿ, ಗುರುಪೂಜಾ ಸೇವಾ ಸಮಿತಿ, ಅಳಿಕೆ, ಶ್ರೀಮತಿ ಮಮತಾ ಸಂಜೀವ, ಪೂರ್ವಾಧ್ಯಕ್ಷರು, ಬಿಲ್ಲವ ಮಹಿಳಾ ಘಟಕ, ವಿಟ್ಲ, ಯಶವಂತ ನಿಡ್ಯ ಸ್ಥಾಪಕಾಧ್ಯಕ್ಷರು, ಯುವವಾಹಿನಿ (ರಿ.) ವಿಟ್ಲ ಘಟಕ, ವಿನೋದ್ ಕುಮಾರ್ ಬೋಳಿಗದ್ದೆ, ಅಧ್ಯಕ್ಷರು, ಬಿಲ್ಲವ ಸಂಘ (ರಿ.) ಕುಂಡಡ್ಕ, ಅನಿಲ್ ಪೂಜಾರಿ, ಮುಳಿಯ ಆಡಳಿತಾಧಿಕಾರಿ, ಬಂಟ್ವಾಳ ತಾಲೂಕು, ಹಾಗೂ ರಾಜೇಶ್, ವಿಟ್ಲ ನಿರ್ದೇಶಕರು, ಆರ್. ಕೆ. ಸಮೂಹ ಸಂಸ್ಥೆಗಳು, ವಿಟ್ಲ ಇವರು ಉಪಸ್ಥಿತರಿರಲಿದ್ದಾರೆ.

ಆಟೋಟ ಸ್ಪರ್ಧೆಗಳು

ಮಕ್ಕಳಿಗೆ:
* ಓಟ
* 4 ಕಾಲಿನ ಓಟ
* ಬಾಲ್ ಪಾಸಿಂಗ್
* ಲಕ್ಕಿ ಗೇಮ್
* ಹಗ್ಗಜಗ್ಗಾಟ
* ಬಾಟಲ್‌ಗೆ ನೀರು ತುಂಬಿಸುವುದು
* ಉಪ್ಪುಗೋಣಿ ಓಟ

ಪುರುಷರಿಗೆ:
* ಓಟ
* ಹಿಮ್ಮುಖ ಓಟ
* 4 ಕಾಲಿನ ಓಟ
* ಹಾಳೆ ಎಳೆಯುವುದು
* ಹಗ್ಗಜಗ್ಗಾಟ
* ವಾಲಿಬಾಲ್
* ಉಪ್ಪುಗೋಣಿ ಓಟ
* ದಂಪತಿ ಓಟ

ಮಹಿಳೆಯರಿಗೆ:
* ಓಟ
* ಹಿಮ್ಮುಖ ಓಟ
* ತ್ರೋಬಾಲ್
* ಹಗ್ಗಜಗ್ಗಾಟ
* ಬಾಲ್ ಪಾಸಿಂಗ್
* ಉಪ್ಪುಗೋಣೆ ಓಟ
* ಬಾಟಲ್ ಗೆ ನೀರು ತುಂಬಿಸುವುದು

ವಿಶೇಷ ಆಕರ್ಷಣೆ: ನಿಧಿ ಶೋಧ

ವಿಶೇಷ ಸೂಚನೆ:
* ಸಮಯ ಅವಕಾಶವಿದ್ದಲ್ಲಿ ಸ್ಥಳದಲ್ಲಿಯೇ ಇತರ ಆಟಗಳನ್ನು ಆಯೋಜಿಸಲಾಗುವುದು.
* ಅಂಪಾಯರ್ ತೀರ್ಮಾನವೇ ಅಂತಿಮ. ಚರ್ಚೆಗೆ ಆಸ್ಪದವಿಲ್ಲ.

- Advertisement -

Related news

error: Content is protected !!