Thursday, August 6, 2026
spot_imgspot_img
spot_imgspot_img

ದುಬೈನ ಕಾರು ಶೋರೂಮ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ – ಕೇರಳದ ಯುವಕ ಸಾವು!

- Advertisement -
- Advertisement -

ದುಬೈನ ಕಾರು ಶೋ ರೂಮ್‌ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಕೇರಳದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಮೃತರನ್ನು ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ನಿವಾಸಿ ಶಿಜಿನ್ ಪೌಲ್ (27) ಎಂದು ಗುರುತಿಸಲಾಗಿದೆ.

ಅವರು ದುಬೈಯ ಶೇಕ್ ಜಾಯೇದ್ ರಸ್ತೆಯಲ್ಲಿರುವ ಕಾರು ಶೋರೂಮ್‌ನಲ್ಲಿ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸ್ಫೋಟ ಸಂಭವಿಸಿದೆ. ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಪೌಲ್ ಅವರು ಮೃತಪಟ್ಟಿರುವುದನ್ನು ದುಬೈಯ ಭಾರತೀಯ ದೂತವಾಸ ಕಚೇರಿ ದೃಢಪಡಿಸಿದೆ.

ದುಬೈಯ ಸರಕಾರದ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಈ ಸ್ಫೋಟದಲ್ಲಿ ಇತರ ಐವರು ಗಾಯಗೊಂಡಿದ್ದಾರೆ. ದುಬೈ ನಾಗರಿಕ ರಕ್ಷಣಾ ತಂಡಗಳು ಈ ಘಟನೆಗೆ ತತ್‌ಕ್ಷಣವೇ ಸ್ಪಂದಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ. ಅಲ್ಲದೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.

- Advertisement -

Related news

error: Content is protected !!