Sunday, August 9, 2026
spot_imgspot_img
spot_imgspot_img

ಬೆಂಗಳೂರು: ಪತ್ನಿಯನ್ನು ಕೊಂದು ಮೋರಿಗೆಸೆದಿದ್ದ ಪತಿಯ ಬಂಧನ

- Advertisement -
- Advertisement -

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಶವವನ್ನು ಮೋರಿಗೆ ಎಸೆದಿದ್ದ ಪಾಪಿ ಪತಿಯನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

ಗೀತಾ (48) ಹತ್ಯೆಯಾದ ಮಹಿಳೆ. ಈಕೆಯ ಪತಿ ಆಂಟೋನಿ (63) ಕೊಲೆಗೈದ ಆರೋಪಿಯಾಗಿದ್ದಾನೆ. ಈತ ಕುಡಿದು ಬಂದು ಪತ್ನಿ ಜೊತೆಗೆ ಗಲಾಟೆ ಮಾಡಿ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಮೋರಿಗೆ ಎಸೆದಿದ್ದ, ಮಹಿಳೆಯ ಶವದ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ.

ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಆರೋಪಿ ಆಂಟೋನಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!