Saturday, August 15, 2026
spot_imgspot_img
spot_imgspot_img

ಶಬರಿಮಲೆ ಚಿನ್ನ ಕಾಣೆಯಾದ ಪ್ರಕರಣದ ತನಿಖಾಧಿಕಾರಿ ಶಶಿಧರನ್ ಗೆ ರಾಷ್ಟ್ರಪತಿ ಪದ

- Advertisement -
- Advertisement -

ತಿರುವನಂತಪುರಂ: ಶಬರಿಮಲೆಯ ದೇಗುಲದಿಂದ ಚಿನ್ನ ಕಾಣೆಯಾದ ಪ್ರಕರಣಗಳ ತನಿಖಾಧಿಕಾರಿಯಾಗಿರುವ ಎಸ್ಪಿ ಎಸ್. ಶಶಿಧರನ್ ಅವರು ಸಲ್ಲಿಸಿದ ‘ವಿಶಿಷ್ಟ ಸೇವೆ’ಗಾಗಿ ‘ರಾಷ್ಟ್ರಪತಿ ಪದಕ’ಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸರಕಾರ ಶುಕ್ರವಾರ ಪ್ರಕಟಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೇರಳ ಪೊಲೀಸ್, ಅಗ್ನಿಶಾಮಕ, ರಕ್ಷಣಾ ಸೇವೆಗಳು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ 11 ಅಧಿಕಾರಿಗಳು ರಾಷ್ಟ್ರಪತಿ ಪೊಲೀಸ್‌ ಮತ್ತು ಅಗ್ನಿಶಾಮಕ ಸೇವಾ ಪದಕಗಳಿಗೆ ಆಯ್ಕೆಯಾಗಿದ್ದಾರೆ.ಈ ವರ್ಷ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕ ಪಡೆದ ಕೇರಳದ ಏಕೈಕ ಅಧಿಕಾರಿ ಶಶಿಧರನ್.ಶಬರಿಮಲೆ ದೇಗುಲದ ಗರ್ಭಗುಡಿ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲ ಚೌಕಟ್ಟುಗಳಿಂದ ಚಿನ್ನ ಕಾಣೆಯಾಗಿದೆ ಎನ್ನಲಾದ ಪ್ರಕರಣಗಳ ತನಿಖೆಗಾಗಿ ಕೇರಳ ಉಚ್ಚ ನ್ಯಾಯಾಲಯ ಶಶಿಧರನ್‌ ಅವರನ್ನು ನೇಮಿಸಿತ್ತು.

- Advertisement -

Related news

error: Content is protected !!