Saturday, August 15, 2026
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ- 80ನೇ ಸ್ವಾತಂತ್ರ್ಯ ದಿನಾಚರಣೆ – ನಿವೃತ್ತ ಯೋಧರಿಂದ ಧ್ವಜಾರೋಹಣ

- Advertisement -
- Advertisement -

ವಿಟ್ಲ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಪ್ರಧಾನ ಕಛೇರಿಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ನಿವೃತ್ತ ಯೋಧರಾದ ಬಾಲಕೃಷ್ಣ ಗೌಡ ಪೊನ್ನೆತಡಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರು ದೇಶಾಭಿಮಾನದ ಕುರಿತು ಮಾತನಾಡಿ ಉಪಸ್ಥಿತರಿಗೆ ಸ್ಫೂರ್ತಿ ತುಂಬಿದರು. ಸಂಘದ ವತಿಯಿಂದ ನಿವೃತ್ತ ಯೋಧ ಬಾಲಕೃಷ್ಣ ಗೌಡ ಪೊನ್ನೆತಡಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಎಚ್, ಉಪಾಧ್ಯಕ್ಷ ಮನೋರಂಜನ್ ಕೆ.ಆರ್, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಜಯಂತಿ ಎಚ್ ರಾವ್, ಶ್ರೀಮತಿ ಶುಭಲಕ್ಷ್ಮಿ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ ವಿ, ಕೇಶವ ಎ, ಭಾಸ್ಕರ್ ಶೆಟ್ಟಿ, ರಾಮದಾಸ ಶೆಣೈ, ಮೋಹನ್ ಕೆ ಎಸ್ ಹಾಗೂ ಸತೀಶ್ ಪಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ರಾಣ್ಯ ಡಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!