Sunday, August 16, 2026
spot_imgspot_img
spot_imgspot_img

ಪಾನ್ ಮಸಾಲ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆ ಇಲ್ಲ: ಯು.ಟಿ.ಖಾದರ್

- Advertisement -
- Advertisement -

ಮಂಗಳೂರು: ಪಾನ್ ಮಸಾಲದಲ್ಲಿ ನಿಕೋಟಿನ್, ತಂಬಾಕು ಹಾಗೂ ಗುಟ್ಕಾ ಮಿಶ್ರಣ ಮಾಡಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಶುದ್ಧ ಪಾನ್ ಮಸಾಲ ಪ್ರತ್ಯೇಕವಾಗಿ ಬಂದರೆ ಯಾವುದೇ ತೊಂದರೆ ಇಲ್ಲ. ಈ ಕ್ರಮದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.ನೆಹರೂ ಮೈದಾನದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

2014ರಲ್ಲಿ ನಾನು ಗುಟ್ಕಾ ನಿಷೇಧಿಸಿದಾಗಲೂ ಅಡಿಕೆ ಬೆಲೆ ಇಳಿಕೆಯಾಗಲಿದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ಆ ಬಳಿಕ ಅಡಿಕೆ ಧಾರಣೆ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ. ಈಗಲೂ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

- Advertisement -

Related news

error: Content is protected !!