Sunday, July 19, 2026
spot_imgspot_img
spot_imgspot_img

ಶಶಿಕಾಂತ್ ಸುಲ್ಕೇರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆ

- Advertisement -
- Advertisement -

ಬೆಂಗಳೂರು: ರಾಜ್ಯ ಮಟ್ಟದ 17ರ ವಯೋಮಾನ ವಿಭಾಗದ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ವಿಶೇಷ ಸಾಧನೆ ಮಾಡಿರುವ ಶಶಿಕಾಂತ್ ಸುಲ್ಕೇರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈಗಾಗಲೇ ತಾಲೂಕು , ಜಿಲ್ಲೆ ಸೇರಿದಂತೆ ಮೈಸೂರು ವಿಭಾಗ , ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಸಾಧನೆ ಮಾಡಿದ ಈತ ಈಗ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ರಾಷ್ಟ್ರದ ಮಟ್ಟದ ಕಬಡ್ಡಿ ಪಂದ್ಯಾಟವು ಹರಿಯಾಣದಲ್ಲಿ ನ.27ರಿಂದ ನಡೆಯಲಿದ್ದು , ಸೋಮವಾರ ಹರಿಯಾಣಕ್ಕೆ ತೆರಳಲಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ 17 ವರ್ಷ ವಯೋಮಾನದ ಸಬ್ ಜ್ಯೂನಿಯರ್ ವಿಭಾಗದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗುವ ಮೂಲಕ ಕಬಡ್ಡಿ ಕ್ಷೇತ್ರದಲ್ಲಿ ಹೊಸ ಬರವಸೆ ಮೂಡಿದೆ‌. ಈತ ಶ್ರೀರಾಮ ಪ್ರೌಢಶಾಲೆ ಸುಲ್ಕೇರಿ ಇಲ್ಲಿ 10 ನೇ ತರಗತಿ ವಿದ್ಯಾರ್ಥಿ. ಸುಲ್ಕೇರಿ ಗ್ರಾಮದ ಭಂಡಾರಗೋಳಿ ನಿವಾಸಿ ಶ್ರೀಧರ್ ಮತ್ತು ಪುಷ್ಪ ರವರ ಪುತ್ರ.

- Advertisement -

Related news

error: Content is protected !!