ಗಣೇಶ್ ಮೆಡಿಕಲ್, ಪಂಚಮಿ ಹೋಟೆಲ್ ಮಾಲಕರು ಸೇರಿದಂತೆ ಹಲವು ಗಣ್ಯರಿಂದ ಅಶ್ಮಿತ್ ಗೆ ಗೌರವಾರ್ಪಣೆ: ಸಪ್ತ ಜ್ಯುವೆಲ್ಸ್ ವತಿಯಿಂದ ಚಿನ್ನದ ಉಡುಗೊರೆ ಮತ್ತು ಗೌರವಾರ್ಪಣೆ
ವಿಟಿವಿ ವಿಟ್ಲ ಮತ್ತು ಎಸ್ ಎಲ್ ವಿ ಬುಕ್ ಹೌಸ್ ವತಿಯಿಂದ ಕಾರ್ಯಕ್ರಮ ಆಯೋಜನೆ




ವಿಟಿವಿ ವಿಟ್ಲ ಮತ್ತು ಎಸ್ ಎಲ್ ವಿ ಬುಕ್ ಹೌಸ್ ಆಶ್ರಯದಲ್ಲಿ ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್ ಎ ಜೆ ರವರಿಗೆ ಹುಟ್ಟೂರಿನ ಗೌರವ ಸಮಾರಂಭ – ರೋಡ್ ಶೋ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ವಿಟ್ಲ ನಿರೀಕ್ಷಣಾ ಕಚೇರಿಯಿಂದ ಹೊರಟ ವಿಜಯೋತ್ಸವ ಮೆರವಣಿಗೆ ಜೈನ ಬಸದಿಯ ವರೆಗೆ ಸಾಗಿ ಬಂದು ಅಲ್ಲಿಂದ ಹಿಂತಿರುಗಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವರೆಗೆ ವಿಟ್ಲ ಪೇಟೆಯ ಪ್ರಮುಖ ರಸ್ತೆಯಲ್ಲಿ ಸಾಗಿ ಬಂದಿದೆ.
ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ವಿಟಿವಿ ಆಡಳಿತ ನಿರ್ದೇಶಕರು ರಾಮ್ ದಾಸ್ ಶೆಟ್ಟಿಯವರು ವಿಜೇತ ಅಶ್ಮಿತ್ ಗೆ ಹಾರ ಹಾಕಿ ರೋಡ್ ಶೋ ಗೆ ಚಾಲನೆ ನೀಡಿದರು.
ಮೆರವಣಿಗೆಯ ಸಂದರ್ಭದಲ್ಲಿ ಪಂಚಮಿ ಹೋಟೆಲ್ ಮಾಲಕರು ರಿತೇಶ್ ಶೆಟ್ಟಿ, ಗಣೇಶ್ ಮೆಡಿಕಲ್ ಮಾಲಕರು ಸತೀಶ್ ಆಳ್ವ ಸೇರಿದಂತೆ ಹಲವರು ಹಲವು ಗಣ್ಯರು ಮತ್ತು ಅಶ್ಮಿತ್ ಅಭಿಮಾನಿಗಳು ಹಾರಾರ್ಪಣೆ ಮಾಡಿ ಗೌರವಿಸಿದರು.
ಈ ವೇಳೆ ಸಪ್ತ ಜ್ಯುವೆಲ್ಸ್ ವತಿಯಿಂದ ಶಾಲು, ಹಾರ ಫಲ ಪುಷ್ಪ ಹಾಗೂ ದೇವರ ಚಿನ್ನದ ವಿಗ್ರಹವನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಪ್ತ ಜ್ಯುವೆಲ್ಸ್ ನ ಪಾಲುದಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜೈನ ಬಸದಿಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೈನ ಬಸದಿಯ ಜಿತೇಶ್ ಜೈನ್ ಮತ್ತು ದರ್ಶನ್ ಜೈನ್ ರವರ ಮಾರ್ಗದರ್ಶನದಲ್ಲಿ ಡಾ. ಮಂದಾರ ಜೈನ್ ಮತ್ತು ಶೀನಣ್ಣ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ಅಶ್ಮಿತ್ ನನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮೆರವಣಿಗಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.

ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹಿಂತಿರುಗಿ ಬಂದು ಅಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮೆರವಣಿಗೆ ವೇಳೆ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು, ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರು ಬಿ. ಗುಣರಂಜನ್ ಶೆಟ್ಟಿ ಯವರು ಮತ್ತು ವಿದೇಶ ಪ್ರಯಾಣದಲ್ಲಿದ್ದ ಎಸ್ ಎಲ್ ವಿ ಬುಕ್ ಹೌಸ್ ನ ಮಾಲಕರು ಉದ್ಯಮಿ ದಿವಾಕರ್ ದಾಸ್ ರವರು ಅಶ್ಮಿತ್ ಗೆ ವಿಡಿಯೋ ಕಾಲ್ ಮೂಲಕ ಶುಭ ಹಾರೈಸಿದರು.

ಮೆರವಣಿಗೆ ಪೂರ್ತಿ ರಕ್ಷಣಾ ಕಾರ್ಯದಲ್ಲಿದ್ದ ವಿಟ್ಲ ಆರಕ್ಷಕ ಠಾಣೆಯ ಪೊಲೀಸ್ ನಿರೀಕ್ಷರಾದ ಪ್ರಕಾಶ್ ದೇವಾಡಿಗ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರು ಅಶ್ಮಿತ್ ಗೆ ಶುಭ ಹಾರೈಸಿದರು.
ದಾರಿಯುದ್ದಕ್ಕೂ ವಿಟ್ಲದ ಜನತೆ ಅಶ್ಮಿತ್ ಗೆ ಶೇಕ್ ಹ್ಯಾಂಡ್ ನೀಡಿ ಶುಭ ಹಾರೈಸಿದರು. ಮಕ್ಕಳು ತಮ್ಮ ಕೈ ನೀಡಿ ಅಶ್ಮಿತ್ ನ ಅಟೋಗ್ರಾಫ್ ಹಾಕಿಸಿಕೊಂಡರು.


ಕಾರ್ಯಕ್ರಮದಲ್ಲಿ ಸುದರ್ಶನ್ ಪಡಿಯಾರ್, ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯರಾದ ಅರುಣ್ ವಿಟ್ಲ, ರವಿ ಪ್ರಕಾಶ್ ವಿಟ್ಲ, ಜಯರಾಮ್ ಬಲ್ಲಾಳ್, ರವಿ ವರ್ಮಾ, ತಿಲಕ್ ರಾಜ್ ಶೆಟ್ಟಿ, ತುಳಸಿ ಶೆಟ್ಟಿ, ವಿಜಿತ್, ವಿನೋದ್ ಕಾಶಿ ಮಠ, ಮೋಹನ್ ಕಟ್ಟೆ, ಪ್ರಭಾಕರ ಅಮೈ, ಕಿಶೋರ್ ಕೊಲ್ಪೆ, ಜನಾರ್ಧನ ಕಾರ್ಯಡಿ, ಶೈಲೇಶ್ ಶೆಟ್ಟಿ, ಯತೀಶ್ ಪೆರುವಾಯಿ ಉಪಸ್ಥಿತರಿದ್ದರು.









