Wednesday, August 26, 2026
spot_imgspot_img
spot_imgspot_img

ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಆಗಸ್ಟ್ 26ರಿಂದ ಸಪ್ಟೆಂಬರ್‍ 06 ರ ವರೆಗೆ ಸೀರತ್ ಅಭಿಯಾನ ಪ್ರಯುಕ್ತ ಜಮಾಅತೆ- ಇಸ್ಲಾಮಿ ಹಿಂದ್ ವಿಟ್ಲ ಘಟಕದ ವತಿಯಿಂದ ಪತ್ರಿಕಾ ಗೋಷ್ಠಿ

- Advertisement -
- Advertisement -

ವಿಟ್ಲ. ಆ. 25: ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ರಾಜ್ಯಾದ್ಯಂತ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ಜಮಾಅತೆ, ಇಸ್ಲಾಮಿ ಹಿಂದ್ ವಿಟ್ಲ ಘಟಕದ ವತಿಯಿಂದ ಪತ್ರಿಕಾ ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಇದರ ಕಿರು ಪರಿಚಯವನ್ನು ವಿವರಿಸಿದ, ಇದರ ವಿಟ್ಲ ಸ್ಥಾನೀಯ ಅಧ್ಯಕ್ಷರಾದ ಶ್ರೀಯುತ ಯಾಸೀನ್ ಬೇಗ್ ರವರು, ಸಂಘಟನೆಯು ಹಮ್ಮಿಕೊಂಡಿರುವ ಸೇವಾ ಯೋಜನೆಯು, ಸಂಪೂರ್ಣ ಮಾನವೀಯ ನೆಲೆಯಲ್ಲಿ ಇದ್ದು, ಇದನ್ನು ಸರ್ವಧರ್ಮೀಯ ಜನರನ್ನು ಪರಿಗಣಿಸಿ ನೀಡಲಾಗುತ್ತದೆ ಅಲ್ಲದೆ ಸಮಾಜದಲ್ಲಿ ಒಳಿತಿನ ಸಂಸ್ಥಾಪನೆ ಹಾಗೂ ಕೆಡುಕಿನ ನಿರ್ಮೂಲನೆಯ ನಿಟ್ಟಿನಲ್ಲಿ ನಮ್ಮ ಸಂಘಟನೆಯು ಸದಾ ಕಾಳಜಿವಹಿಸಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಖಾದರ್ ಕುಕ್ಕಾಜೆ ಅವರು ಪ್ರಸಕ್ತ ಸೀರತ್ ಅಭಿಯಾನದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು.

ಅದರಂತೆ ಈ ಅಭಿಯಾನದ ಅಂಗವಾಗಿ, ಅಂತಿಮ ಪ್ರವಾದಿ ಮುಹಮ್ಮದ್(ಸ) ರವರನ್ನು ಸಮಾಜ ಬಾಂಧವರಿಗೆ ಪರಿಚಯಿಸುವ ಸಲುವಾಗಿ ಶ್ರೀಯುತ ಯೋಗೇಶ್ ಮಾಸ್ಟರ್ ರವರಿಂದ ರಚಿತವಾದ, ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್(ಸ) ಎಂಬ ಪುಸ್ತಕ ಹಾಗೂ ವಾರ್ತಾ ಭಾರತಿ ಪತ್ರಿಕೆಯ ಸಂಪಾದಕರಾದ ಅಬ್ದುಲ್ ಸಲಾಮ್ ಪುತ್ತಿಗೆಯವರ ಕೃತಿಯಾದ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ) ಎಂಬೆರಡು ಪುಸ್ತಕಗಳನ್ನು ವಿತರಿಸಲಾಗುವುದು ಅಲ್ಲದೆ ಈ ಅಭಿಯಾನದ ಅಂಗವಾಗಿ ದಿನಾಂಕ 18.9.2026 ರ ಸಾಯಂಕಾಲ, ಬಿ. ಸಿ. ರೋಡಿನ ಸಾಗರ್ ಅಡಿಟೋರಿಯಮ್ ನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಸಮಾವೇಶ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶವು 25.09.2026 ರಂದು ಮೂಡಬಿದ್ರೆಯಲ್ಲಿ ಜರುಗಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಾನೀಯ ಘಟಕದಲ್ಲಿ ಸಕ್ರಿಯರಾಗಿರುವ, ಸರ್ವಶ್ರೀ ಅಬ್ದುಲ್ಲ ಕುಂಞಿ, ಯಾಕುಬ್ ಇಸ್ಮಾಯಿಲ್, ಇಬ್ರಾಹೀಮ್ ಸಯೀದ್, ಅಬ್ದುಲ್ ಅಝೀಝ್ ಹಾಗೂ ಮುಹಮ್ಮದ್ ಇಸಾಖ್ ಉಪಸ್ಥಿತರಿದ್ದರು.

- Advertisement -

Related news

error: Content is protected !!