Wednesday, August 26, 2026
spot_imgspot_img
spot_imgspot_img

ವಿಟ್ಲ: ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ(ರಿ) ವತಿಯಿಂದ ಜಿಲ್ಲಾ ವಾರ್ಷಿಕ ಮಿಲನೋತ್ಸವ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.)ವಿಟ್ಲ ಘಟಕದ ವತಿಯಿಂದ ನಡೆಯುವ ಜಿಲ್ಲಾ ವಾರ್ಷಿಕ ಮಿಲನೋತ್ಸವ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ಆ. 26 ಬುಧವಾರ ಬೆಳಿಗ್ಗೆ 9:30 ಗಂಟೆಗೆ ವಿಟ್ಲದ ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವಿಟ್ಲ ಘಟಕವು ಆಯೋಜಿಸಿರುವ ಮಿಲನೋತ್ಸವದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವಿಟ್ಲ ಅರಮನೆಯ ಕೃಷ್ಣಯ್ಯ ಬಳ್ಳಾಲ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು

ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಅಧ್ಯಕ್ಷರು ಬಾಬು ಕೆ. ವಿಟ್ಲ , ಪ್ರಧಾನ ಕಾರ್‍ಯದರ್ಶಿ ಪೀಯೂಷ್ ಮ್ಯಾಕ್ಸಿಂ ಸ್ವಿಕೇರಾ , ಜಿಲ್ಲಾ ಕೋಶಾಧಿಕಾರಿ ನಿಶಿತ್ ಪೂಜಾರಿ, ಉಪಾಧ್ಯಕ್ಷರು ಕ್ಲೇವರ್‍ ಡಿ’ಸೋಜ, ಮಂಗಳೂರು, ಸುಭಾಶ್ಚಂದ್ರ ಜೈನ್ ಬಂಟ್ವಾಳ, ಶಿವಪ್ರಸಾದ್ ಹೆಗ್ಡೆ ಮೂಡುಬಿದಿರೆ, ಹಾಜಿ ಅಬ್ಧುಲ್ ಲತೀಪ್ ಬೆಳ್ತಂಗಡಿ ಹಾಗೂ ವಿಟ್ಲ ಘಟಕದ ಪದಾಧಿಕಾರಿಗಳಾದ ಗೌರವಧ್ಯಕ್ಷರು ಚಂದ್ರಹಾಸ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಬರೆ ಕುಂಡಡ್ಕ, ಸಂಘಟನಾ ಕಾರ್‍ಯದರ್ಶಿ ಇಸ್ಮಾಯಿಲ್ ಬನಾರಿ, ಗೌತಮ್ ಶೆಟ್ಟಿಗಾರ್‍ ಸಾಲೆತ್ತೂರು, ಅಧ್ಯಕ್ಷರು ಪದ್ಮನಾಭ ಶೆಟ್ಟಿ ಮಂಕುಡೆ ಕಲ್ಕಾಜೆ , ಜೊತೆ ಕಾರ್ಯದರ್ಶಿ ಆನಂದ SGR ಅಡ್ಯನಡ್ಕ, ಕ್ರೀಡಾ ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಕುಡ್ತಮುಗೇರು, ಉಪಾಧ್ಯಕ್ಷರು ಇಕ್ಬಾಲ್ ರೆಡ್ ಶಾಮಿಯಾನ , ಹರೀಶ್ ದೇವಸ್ಯ, ಕೋಶಾಧಿಕಾರಿ ದಿನೇಶ್ ಡಿ. ಪುಣಚ ಹಾಗೂ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಸಂಜೀವ ಪೂಜಾರಿ ಭಾರತ್ ಆಡಿಟೋರಿಯಂ ಉಪಸ್ಥಿತರಿದ್ದರು.

- Advertisement -

Related news

error: Content is protected !!
Skip to toolbar