Sunday, August 30, 2026
spot_imgspot_img
spot_imgspot_img

ಚಿಕ್ಕಮಗಳೂರು: ಆಹಾರ ಇಲಾಖೆ ಅಧಿಕಾರಿಗಳ ದಾಳಿ – 30 ಕೆಜಿ ನಕಲಿ ನಾಟಿ ತುಪ್ಪ ಪತ್ತೆ!

- Advertisement -
- Advertisement -

ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯಲ್ಲಿನ ಮನೆಯೊಂದರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ 30 ಕೆ.ಜಿ.ಗೂ ಹೆಚ್ಚಿನ ನಕಲಿ ನಾಟಿ ತುಪ್ಪ ವಶ ಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯೊಂದರಲ್ಲಿ ದಂಧೆಕೋರರು ಡಾಲ್ಡಾ, ರಾಸಾಯನಿಕ ಬಳಸಿ ತುಪ್ಪ ತಯಾರಿಸಿರುವುದು ಗೊತ್ತಾಗಿದೆ. ಅದನ್ನು ನಾಟಿ ತುಪ್ಪ ಎಂದು ಮಾರಾಟ ಮಾಡುತ್ತಿದ್ದರು.

ದಂಧೆಕೋರರು ಮನೆಯ ಬಾಗಿಲು ಲಾಕ್‌ ಮಾಡಿ ಪರಾರಿಯಾಗಿದ್ದರು. ಕಳೆದ ವಾರ ಪಾಳುಬಿದ್ದ ಮನೆಯ ಮೇಲೆ ದಾಳಿ ಮಾಡಿ ನಕಲಿ ತುಪ್ಪ ವಶಪಡಿಸಿಕೊಂಡಿದ್ದರು. ಬಳ್ಳಾರಿ ಮೂಲದ ಒಂದೇ ಟೀಮ್ ನಿಂದ ನಿರಂತರವಾಗಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ.

- Advertisement -

Related news

error: Content is protected !!