Tuesday, September 1, 2026
spot_imgspot_img
spot_imgspot_img

‘ಮೋದಿ ನನ್ನ ಜೀವನವನ್ನು ನರಕ ಮಾಡಿದರು-ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿದ್ದಾರೆ’: ಪ್ರಧಾನಿ ವಿರುದ್ಧ ಬಾಲಕಿಯ ಗಂಭೀರ ಆರೋಪ

- Advertisement -
- Advertisement -

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಜೀವನವನ್ನು ನರಕ ಮಾಡಿದ್ದಾರೆ ಎಂದು 15 ವರ್ಷದ ಬಾಲಕಿ ವೀಡಿಯೊವೊಂದರಲ್ಲಿ ಆರೋಪಿಸಿದ್ದಾಳೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.ಈ ವಿಡಿಯೋವನ್ನು ಯಾವಾಗ ಅಥವಾ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಆದರೆ, ಈ ವೀಡಿಯೊ ಕೃತಕ ಬುದ್ಧಿ ಮತ್ತೆ ಬಳಸಿ ರಚಿಸಿದ್ದಲ್ಲ ಎಂದು ಬಾಲಕಿಯ ಪರ ವಕೀಲರು ದೃಢಪಡಿಸಿದ್ದಾರೆ.ಜಂತರ್ ಮಂತರ್‌ನಲ್ಲಿ ನಡೆದ ಯುವ ಜನರ ಪ್ರತಿಭಟನೆಯ ಸಂದರ್ಭ ಪ್ರಧಾನಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಈ ಬಾಲಕಿಯ ವಿರುದ್ಧ ಜುಲೈ 30ರಂದು ಪ್ರಕರಣ ದಾಖಲಿಸಲಾಗಿತ್ತು.ಒಂದು ದಿನದ ನಂತರ ಆಕೆ ತನ್ನ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಕ್ಷಮೆ ಯಾಚಿಸಿದ್ದಳು. ಆದರೆ, ಬಾಲಕಿಯ ತಾಯಿ ಪತ್ರಿಕೆಯೊಂದರ ಜೊತೆ ಮಾತನಾಡುವ ಸಂದರ್ಭ, ಪೊಲೀಸರು ಮತ್ತು ಮಾಧ್ಯಮದವರಿಂದ ಕಿರುಕುಳಕ್ಕೊಳಗಾದ ನಂತರ ತಮ್ಮ ಕುಟುಂಬ ನೋಯ್ದಾದಲ್ಲಿರುವ ಬಾಡಿಗೆ ಮನೆಯನ್ನು ತೊರೆದಿದೆ ಎಂದು ತಿಳಿಸಿದ್ದರು.

ಬಿಜೆಪಿಯ ಹಲವು ಬೆಂಬಲಿಗರು ಬಾಲಕಿಯ ಕುಟುಂಬದ ಸದಸ್ಯರ ಫೋನ್ ಸಂಖ್ಯೆ ಮತ್ತು ಹೆಸರುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಈ ಪೋಸ್ಟ್‌ಗಳಲ್ಲಿ 15 ವರ್ಷದ ಬಾಲಕಿಯ ವಿರುದ್ಧ ನಿಂದನೀಯ ಮತ್ತು ಲೈಂಗಿಕ ಬಣ್ಣದ ಟೀಕೆಗಳಿದ್ದವು.

ಕಾಂಗ್ರೆಸ್ ಸೋಮವಾರ ಹಂಚಿಕೊಂಡ ಇತ್ತೀಚೆಗಿನ ವೀಡಿಯೊದಲ್ಲಿ ಆಕೆ, “ಪ್ರಧಾನ ಮಂತ್ರಿ ಅವರು ನನ್ನ ಸ್ವತಂತ್ರವೂ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುವಷ್ಟರ ಮಟ್ಟಿಗೆ ಹಿಂಸಿಸಿದ್ದಾರೆ” ಎಂದು ಆರೋಪಿಸಿದ್ದಾಳೆ.“ನನಗೆ ನನ್ನ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಾನು ಹೋದಲ್ಲೆಲ್ಲಾ ನನ್ನ ಮುಖವನ್ನು ಮುಚ್ಚಿಕೊಳ್ಳಬೇಕಾಗಿದೆ” ಎಂದು ಆಕೆ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ.”15 ವರ್ಷದ ಬಾಲಕಿಯ ಮೇಲೆ ಬಿಜೆಪಿ ಗೂಂಡಾಗಳಿಂದ ಟ್ರೋಲ್ ಮಾಡಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರು ನಾಚಿಕೆಪಡಬೇಕು”ಎಂದು ಕಾಂಗ್ರೆಸ್ ಹೇಳಿದೆ.

ಆಕೆ ಕ್ಷಮೆ ಯಾಚಿಸಿದ ಒಂದು ದಿನದ ನಂತರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರೆನ್ನಲಾದ ವಿದ್ಯಾರ್ಥಿನಿಯನ್ನು ಕ್ಷಮಿಸಲು ಬಯಸುವುದಾಗಿ ಹೇಳಿದ್ದರು.ಅದರ ಬೆನ್ನಲ್ಲೇ 15 ವರ್ಷದ ಬಾಲಕಿಯ ವಿರುದ್ಧದ ದೂರನ್ನು ಹಿಂಪಡೆಯಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ, ಎಫ್‌ಐಆ‌ರ್ ಹಿಂಪಡೆಯಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

- Advertisement -

Related news

error: Content is protected !!