




ವಿಟ್ಲ: ಬಾಲಗೋಕುಲ ವಿಟ್ಲ ಕ್ಷೇತ್ರ ಸಮಿತಿ ಹಾಗೂ ಮೈತ್ರೇಯೀ ಗುರುಕುಲ ಮೂರುಕಜೆ ಇದರ ಸಹಯೋಗದೊಂದಿಗೆ 19 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ವಿಟ್ಲ ಪರಿಸರದ ಎಲ್ಲಾ ಬಾಲಗೋಕುಲದ ಮಕ್ಕಳ ಶೋಭಾಯಾತ್ರೆಯು ಸೆ.04 ಶುಕ್ರವಾರದಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 9.30ಕ್ಕೆ ವಿಟ್ಲ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದಿಂದ ಶೋಭಾಯಾತ್ರೆ ಹೊರಡುವುದು.
ಶೋಭಾಯಾತ್ರೆಯನ್ನು ವಿಟ್ಲದ ಅನೂಪ್ ಜ್ಯುವೆಲ್ಲರಿಯ ಪುರಂದರ ಆಚಾರ್ಯ ಇವರು ಉದ್ಘಾಟಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ವಿಟ್ಲದ ಆಸುಪಾಸಿನ ಮಕ್ಕಳ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಲಿದೆ.
ಬೆಳಗ್ಗೆ 11.00 ಗಂಟೆಗೆ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ‘ಸುವರ್ಣ ರಂಗ ಮಂದಿರ’ ದಲ್ಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇಲ್ಲಿನ ಪ್ರಾಂಶುಪಾಲರಾದ ವೆಂಕಟಕೃಷ್ಣ ಶರ್ಮ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ಸಭೆಯಲ್ಲಿ ಮೂರುಕಜೆ ಆಜೇಯ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಮತಿ ರೂಪಲೇಖ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಯಕ್ಷಧ್ರುವ ಯಕ್ಷ ಶಿಕ್ಷಣ ಪಟ್ಲ ಫೌಂಡೇಶನ್, ಮಂಗಳೂರು ಇದರ ಸಹಸಂಚಾಲಕರಾದ ಶ್ರೀಮತಿ ಸಾಯಿಸುಮಾ ಎಂ. ನಾವಡ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸತೀಶ್ ವಿಟ್ಲ.ಕೆ.,ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ (ರಿ.) ವಿಟ್ಲ ಅಧ್ಯಕ್ಷರಾದ ಮೋನಪ್ಪ ಗೌಡ, ಶಿವಾಜಿನಗರ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಗಂಟೆ 12.00ರಿಂದ ಬಾಲಗೋಕುಲ ಮಕ್ಕಳಿಂದ ಮತ್ತು ನಾಟ್ಯಮಯೂರಿ ರಕ್ಷಿತ್ ಶೆಟ್ಟಿ ಪಡೆಯವರ ನಿರ್ದೇಶನದಲ್ಲಿ ಆರ್. ಕೆ. ಯಕ್ಷಗಾನ ಕಲಾಕೇಂದ್ರ ವಿಟ್ಲ ಇಲ್ಲಿನ ವಿದ್ಯಾರ್ಥಿಗಳಿಂದ ರಾಜೇಶ್ ವಿಟ್ಲ ಆರ್. ಕೆ. ಸಮೂಹಸಂಸ್ಥೆಗಳ ನಿರ್ದೇಶಕರ ಸಾರಥ್ಯದಲ್ಲಿ ‘ಲೀಲಾಮಾನುಷ ವಿಗ್ರಹ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿ.ಸೂ:
- 8ನೇ ತರಗತಿವರೆಗಿನ ಎಲ್ಲಾ ಬಾಲಕ-ಬಾಲಕಿಯರು ಶ್ರೀ ಕೃಷ್ಣ ಗೋಪಿಕೆಯರ ವೇಷ ಧರಿಸಿ ಭಾಗವಹಿಸಬೇಕಾಗಿ ವಿನಂತಿ.
- ಬೆಳಿಗ್ಗೆ ಗಂಟೆ 8-45ಕ್ಕೆ ವಿಟ್ಲ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದಲ್ಲಿ ಎಲ್ಲಾ ವೇಷಧಾರಿ ಮಕ್ಕಳು ಸೇರಬೇಕು.
- ಶೋಭಾಯಾತ್ರೆಯಲ್ಲಿ ಎಲ್ಲಾ ವೇಷದಾರಿ ಮಕ್ಕಳು ಪಾಲ್ಗೊಳ್ಳಬೇಕು.
- ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ.








